ಕಿಮ್​ ಜಾಂಗ್ ಉನ್​ಗೆ ಪತ್ರ ಬರೆದ ದಕ್ಷಿಣ ಕೊರಿಯಾ.. ಅದ್ರಲ್ಲಿ ಏನಿದೆ ಗೊತ್ತಾ?

masthmagaa.com:

ಕಿಮ್ ಜಾಂಗ್ ಉನ್​ರ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಪರಸ್ಪರ ಬದ್ಧ ವೈರಿಗಳು. ಒಬ್ರಿಗೆ ಕಂಡ್ರೆ ಮತ್ತೊಬ್ರಿಗೆ ಆಗಲ್ಲ. ಇದರ ಪರಿಣಾಮ ಎರಡು ದೇಶಗಳ ನಡುವೆ ಮಾತುಕತೆಯೇ ನಿಂತುಹೋಗಿದೆ. ಹೋದ್ವರ್ಷ ಅಂತೂ ಗಡಿಯಲ್ಲಿದ್ದ ಸಂಪರ್ಕ ಕಚೇರಿಯನ್ನೇ ಸ್ಫೋಟಿಸಿದ ಕಿಮ್​ ಜಾಂಗ್ ಉನ್​, ದಕ್ಷಿಣ ಕೊರಿಯಾ ಜೊತೆ ಮಾತನಾಡೋ ಯಾವ ಉದ್ದೇಶವೂ ಇಲ್ಲ ಅನ್ನೋ ಸಂದೇಶ ರವಾನಿಸಿದ್ರು. ಆದ್ರೀಗ ದಕ್ಷಿಣ ಕೊರಿಯಾದಿಂದ ಕಿಮ್​ ಜಾಂಗ್​ ಉನ್​ಗೆ ಒಂದು ಲೆಟರ್ ಹೋಗಿದೆ ಅಂತ ದಕ್ಷಿಣ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿದೆ. ಈ ಲೆಟರ್ ಅನ್ನ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು ಕಿಮ್​ ಜಾಂಗ್​ ಉನ್​ಗೆ ಬರೆದಿದ್ದಾರೆ. ಪತ್ರದಲ್ಲಿ, ಸಾಧ್ಯವಾದ್ರೆ ಮಾತುಕತೆಗೆ ಬರುವಂತೆ ಕಿಮ್​​ಗೆ ಆಹ್ವಾನಿಸಲಾಗಿದೆ. ಮಾತುಕತೆ ಆನ್​ಲೈನ್​ ಮೂಲಕ ನಡೆದ್ರೂ ಸಮಸ್ಯೆ ಇಲ್ಲ ಅಂತಾನೂ ಉಲ್ಲೇಖಿಸಲಾಗಿದೆಯಂತೆ. ಅಂದ್ಹಾಗೆ ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಮೂನ್​ ಜೇ ಇನ್​ ಭೇಟಿಯಾಗಿದ್ದರು. ಆ ಟೈಮಲ್ಲೇ ಈ ಪತ್ರವನ್ನ ಕಿಮ್ ಜಾಂಗ್​ಗೆ ಕಳಿಸಲಾಗಿದೆ. ಅಂದ್ಹಾಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಕೂಡ ಈ ವರ್ಷದ ಜನವರಿಯಲ್ಲಿ ಕೊರೋನಾವೈರಸ್​ ಪ್ಯಾಂಡೆಮಿಕ್​ ಕುರಿತು ದಕ್ಷಿಣ ಕೊರಿಯಾ ಜೊತೆ ಮಾತುಕತೆ ನಡೆಸೋ ಬಗ್ಗೆ ಬಹಿರಂಗವಾಗಿ ಹೇಳಿದ್ದರು ಅಂತ ವರದಿಯಾಗಿದೆ. ಆದ್ರೆ ಮೂನ್​ ಜೇ ಇನ್​ ಮತ್ತು ಅವರ ಸರ್ಕಾರವನ್ನ ಸದಾ ಟೀಕಿಸುವ, ಅಪಹಾಸ್ಯ ಮಾಡೋ ಕಿಮ್​ ಜಾಂಗ್ ಉನ್​ ಮಾತುಕತೆ ನಡೆಸ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply