ರೆಡ್‌ ಕಾರ್ಪೆಟ್‌ನಲ್ಲಿ ಶಾರುಖ್‌ ಕುಟುಂಬದ ಜೊತೆ ಸಲ್ಮಾನ್‌ ಭಾಯ್‌: ಫೋಟೊ ವೈರಲ್‌!

masthmagaaa.com:

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿಯ ಹೆಸರಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಿರ್ಮಿಸಲಾಗಿದೆ. ಇದೊಂದು ಭಾರತದ ಅತಿ ದೊಡ್ಡ ಪ್ರದರ್ಶನ ಕಲಾ ಕೇಂದ್ರವಾಗಿದೆ. ಈ ಕೇಂದ್ರವು ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ಫ್ಯಾಷನ್ ಇನ್ನೂ ಹಲವು ಮಾದರಿಯ ಪ್ರದರ್ಶನಗಳಿಗೆ ವೇದಿಕೆ ಒದಗಿಸುತ್ತಿದೆ. ನಾಲ್ಕು ಅಂತಸ್ಥಿನ ಈ ಕೇಂದ್ರದಲ್ಲಿ ಒಮ್ಮೆಗೆ ಹಲವು ಕಲೆಗಳ ಪ್ರದರ್ಶನ ಹಾಗೂ ವೀಕ್ಷಣೆ ನಡೆಯಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕೇಂದ್ರವು ಒಳಗೊಂಡಿದ್ದು, ಸುಸಜ್ಜಿತ ಸ್ಟುಡಿಯೋ ಸಹ ಎನ್​ಎಂಸಿಸಿಯಲ್ಲಿ ಇದೆ. ಜೊತೆಗೆ ಕಲಾ ಶಿಕ್ಷಣ, ತರಬೇತಿ ಕೇಂದ್ರಗಳನ್ನು ಸಹ ನಿರ್ಮಿಸಲಾಗಿದೆ. ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಮುಂಬೈನಲ್ಲಿ ಐಶಾರಾಮಿಯಾಗಿ, ಸಕಲ ಆಧುನಿಕ ಸೌಲಭ್ಯಗಳನ್ನೊಳಗೊಂಡಿದ್ದು, ಏಪ್ರಿಲ್ 01 ರಿಂದ ಕಲಾ ಪ್ರದರ್ಶನ ಆರಂಭ ಮಾಡಲಾಗಿತ್ತು.

ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಎರಡನೇ ದಿನದ ಸಂಭ್ರಮಾಚರಣೆಯಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಅವರು ಹಾಲಿವುಡ್‌ ಸೆಲಬ್ರಿಟಿಗಳಾದ ಟಾಮ್ ಹಾಲೆಂಡ್ ಮತ್ತು ಝೆಂಡಯಾ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು. ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಕೂಡ ಈವೆಂಟ್‌ನಲ್ಲಿ ಉಪಸ್ಥಿತರಿದ್ದರು. ಇನ್ನೂ ಶಾರುಖ್‌ ಫ್ಯಾಮಿಲಿ ಮತ್ತು ಸಲ್ಮಾನ್‌ ಖಾನ್‌ ಓಟ್ಟಿಗೆ ಇದ್ದಂತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ವೈರಲ್‌ ಆಗ್ತಾ ಇದೆ. ಆದರೆ ಈ ಫೋಟೊದಲ್ಲಿ ಶಾರುಖ್‌ ಖಾನ್‌ ಇಲ್ಲ, ಆದರೆ ಆ ಸ್ಥಾನವನ್ನು ತುಂಬಲು ಸಲ್ಮಾನ್ ಖಾನ್ ಅವರ ಜೊತೆ ಪೋಸ್ ಕೊಟ್ಟಿದ್ದಾರೆ. ಸಲ್ಮಾನ್‌ ಖಾನ್‌ ಒಬ್ಬರೇ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇನ್ನೂ ಶಾರುಖ್‌ ಖಾನ್‌ ರೆಡ್‌ ಕಾರ್ಪೇಟ್‌ನ್ನ ಮಿಸ್‌ ಮಾಡಿಕೊಂಡ್ರು, ಆ ಸಮಯದಲ್ಲಿ ಸಲ್ಮಾನ್‌ ಖಾನ್‌ ಶಾರುಖ್‌ ಅವರ ಫ್ಯಾಮಿಲಿ ಜೊತೆ ಫೊಟೊಗೆ ಪೋಸ್‌ ಕೊಟ್ಟಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಈ ಫೋಟೊ ಈಗ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply