ಬಾಲಿವುಡ್ ಬ್ಯಾಡ್​​ಬಾಯ್ ಸಲ್ಲುಗೆ ಹಾವು ಕಡಿತ!

masthmagaa.com:

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮುಂಬೈನ ಪಾನ್ವೇಲ್ ಫಾರ್ಮ್ ಹೌಸ್ ನಲ್ಲಿ ಹಾವು ಕಚ್ಚಿದೆ. ಸೋಮವಾರ ಅಂದ್ರೆ, ನಾಳೆ ಸಲ್ಮಾನ್ ಗೆ 56ನೇ ಹುಟ್ಟುಹಬ್ಬ. ಅದಕ್ಕೂ ಒಂದು ದಿನ ಮೊದಲು ಹಾವು ಈ ರೀತಿ ಕುಟುಕಿದೆ. ಆದ್ರೆ ಅದೃಷ್ಟವಶಾತ್ ಅದು ವಿಷಕಾರಿ ಹಾವಲ್ಲ. ಹೀಗಾಗಿ ಸಲ್ಮಾನ್ ಖಾನ್ ಗೆ ಯಾವುದೇ ಅಪಾಯ ಆಗಿಲ್ಲ. ಆದ್ರೂ ಮುಂಜಾಗೃತಾ ಕ್ರಮವಾಗಿ ಮುಂಬೈನ MGM ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಡಿಸ್ಚಾರ್ಜ್ ಮಾಡಲಾಗಿದೆ. ಅಂದಹಾಗೆ ಸಲ್ಮಾನ್ ಖಾನ್ ಅವರ ಈ ಪಾನ್ವೇಲ್ ಫಾರ್ಮ್ ಹೌಸ್ ಗೆ ತಂಗಿ ಅರ್ಪಿತಾ ಖಾನ್ ಶರ್ಮಾ ಹೆಸರನ್ನ ಇಟ್ಟಿದ್ದಾರೆ ಸಲ್ಮಾನ್ ಖಾನ್.

-masthmagaa.com

Contact Us for Advertisement

Leave a Reply