ಐಶ್ವರ್ಯ ರೈ ಮೇಲೆ ಕೈಮಾಡಿದ್ದ ಸಲ್ಮಾನ್‌ ಖಾನ್‌? : ವೈರಲ್‌ ಆಯ್ತು ಹಳೇ ವಿಡಿಯೋ !

masthmagaa.com:

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಹಳೇ ವಿಡಿಯೋವೊಂದು ವೈರಲ್‌ ಆಗ್ತಾ ಇದೆ. ಈ ವಿಡಿಯೋದಲ್ಲಿ ಸಲ್ಮಾನ್‌ ಖಾನ್‌ ಸಿಟ್ಟು ಬಂದಾಗ ತಾನು ಹೇಗೆ ವರ್ತಿಸ್ತೀನಿ ಅನ್ನೋದನ್ನ ಹೇಳಿದ್ದಾರೆ. ಅಲ್ಲದೇ ಐಶ್ವರ್ಯ ರೈ ಮೇಲೂ ಕೂಡ ಸಲ್ಮಾನ್‌ ಕೈ ಮಾಡಿದ್ರು ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು. ಅದರ ಬಗ್ಗೆಯೂ ಕೂಡ ಮಾತನಾಡಿದ ಸಲ್ಮಾನ್‌ ಖಾನ್‌ ಅವರ ಥ್ರೋಬ್ಯಾಕ್‌ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗ್ತಾ ಇದೆ.

ಐಶ್ವರ್ಯ ರೈ ಮತ್ತು ಸಲ್ಮಾನ್‌ ಖಾನ್‌ ಅವರ ಬ್ರೇಕ್‌ಅಪ್‌ ಆದಮೇಲೆ “ಸಲ್ಮಾನ್‌ ನನಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ರು, ಮತ್ತು ದೈಹಿಕ ಹಲ್ಲೆ ನಡೆಸಿದ್ರು ಹಾಗಾಗಿ ನಾನು ಬ್ರೇಕ್‌ಅಪ್‌ ಮಾಡಿಕೊಂಡೆ” ಅಂತ ಐಶ್ವರ್ಯ ರೈ ಆರೋಪ ಮಾಡಿದ್ರು.

ಇದರ ನಂತರದ ಸಂದರ್ಶನದಲ್ಲಿ “ನೀವು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ರಾ” ಅಂತ ಕೇಳಿದ ಪ್ರಶ್ನೆಗೆ ಸಲ್ಮಾನ್‌ ಖಾನ್‌ ಉತ್ತರ ಕೊಟ್ಟಿದ್ದಾರೆ. “ನನಗೆ ಬಹಳ ಬೇಗ ಸಿಟ್ಟು ಬರತ್ತೆ, ಅದು ನಿಜಾ , ಹಳೇ ಸಂದರ್ಶನವೊಂದರಲ್ಲಿ ಸಿಟ್ಟನ್ನ ಕಂಟ್ರೋಲ್‌ ಮಾಡೋಕೆ ಆಗದೇ ಟೇಬಲ್‌ಗೆ ಹೊಡೆದು ಮುರಿದು ಹಾಕಿದ್ದೆ. ಅದನ್ನ ನೋಡಿ ಆಂಕರ್‌ ಫುಲ್‌ ಶಾಕ್‌ ಆಗಿ ಬಿಟ್ಟಿದ್ರು. ಏನಾದರೂ ಜಗಳ ಆದಾಗ ನಾನು ಸೀದಾ ಹೊಡಿಯೋದಕ್ಕೆ ಹೋಗಿ ಬಿಡ್ತೇನೆ. ನನ್ನ ಹೊಡೆತ ತಡ್ಕೊಂಡು ಅವಳು ಬದುಕ್ತಾಳಾ ಅನ್ನೊ ಗ್ಯಾರಂಟಿ ನನಗೆ ಇಲ್ಲ. ಆದರೆ ನಾನು ಐಶ್ವರ್ಯಗೆ ಹೊಡೆದಿಲ್ಲ. ಆದರೂ ಯಾಕೆ ಆ ರೀತಿ ಸುದ್ದಿ ಆಯ್ತು ಅಂತ ಕಾರಣ ಗೊತ್ತಿಲ್ಲ” ಅಂತ ಹೇಳಿದ್ದಾರೆ. ಆದರೆ ಯಾವ ಪತ್ರಕರ್ತ ಕೇಳಿದ ಪ್ರಶ್ನೆಗೆ ಸಿಟ್ಟು ಬಂತು ಅಂತ ಪತ್ರಕರ್ತನ ಹೆಸರನ್ನ ಎಲ್ಲಿಯೂ ಹೇಳಿಲ್ಲ.

-masthmagaa.com

Contact Us for Advertisement

Leave a Reply