ಬಿಗ್ ಬಾಸ್:13 ಓಪನಿಂಗ್ ವೇಳೆ ಸಲ್ಲು ಸಿಟ್ಟು..! ವಿಡಿಯೋ ವೈರಲ್

ಸೆಪ್ಟೆಂಬರ್ 23ರಂದು ಹಿಂದಿಯ 13ನೇ ಆವೃತ್ತಿಯ ಬಿಗ್ ಬಾಸ್ ಗೆ ನಟ ಸಲ್ಮಾನ್ ಖಾನ್ ಚಾಲನೆ ಕೊಟ್ಟಿದ್ದಾರೆ. ಮುಂಬೈನ ಅಂದೇರಿ ಮೆಟ್ರೋ ಸ್ಟೇಷನ್‍ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರಿಂದ ಸಲ್ಮಾನ್ ಖಾನ್ ಮೆಟ್ರೋ ಟ್ರೈನಲ್ಲೇ ಆಗಮಿಸಿದ್ರು. ಇದೇ ವೇಳೆ ಅವರ ಸ್ವಾಗತಕ್ಕೆ ಆಯೋಜಿಸಿದ್ದ ಮ್ಯೂಸಿಕ್‍ಗೆ ಸ್ಟೆಪ್ ಕೂಡ ಹಾಕಿದ್ರು. ಆದ್ರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನವೇ ಫೋಟೋ ಗ್ರಾಫರ್ ಒಬ್ಬರ ಜೊತೆ ಕಿರಿಕ್ ಮಾಡಿಕೊಂಡ್ರು. ಬೇಸರಗೊಂಡ ಸಲ್ಮಾನ್ ಖಾನ್, ನೀವು ನನ್ನ ಎಲ್ಲಾ ಕಾರ್ಯಕ್ರಮಗಳನ್ನು ಹಾಳು ಮಾಡಲು ನೋಡ್ತೀರಿ. ನಿಮಗೆ ನನ್ನಿಂದ ಏನಾದ್ರೂ ತೊಂದ್ರೆ ಇದ್ರೆ ನನ್ನನ್ನು ಬ್ಯಾನ್ ಮಾಡ್ಬಿಡಿ ಅಂದ್ರು. ಅಲ್ಲದೆ ಆತನಿಗೆ ಏನಾದ್ರೂ ಮಾಡಿ ಎಂದು ಉಳಿದ ಫೋಟೋಗ್ರಾಫರ್ಸ್ ಬಳಿ ಮನವಿ ಮಾಡಿದ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://www.instagram.com/p/B2xBGdmAp9Z/?utm_source=ig_web_copy_link

Contact Us for Advertisement

Leave a Reply