ಅನಾರೋಗ್ಯದ ನಡುವೆಯೂ “ಟೆಂಪಲ್‌ ರನ್‌” ಶುರು ಮಾಡಿದ ಸಮಂತಾ

masthmagaa.com:

ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಪ್ರಚಾರ ಕಾರ್ಯ ಶುರುವಾಗುವ ಮುನ್ನವ ಸ್ಯಾಮ್, ದೇವಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ತಿದ್ದಾರೆ. ಈ ಕಾಯಿಲೆಯ ನಂತರ ಸಮಂತಾ ಹೆಚ್ಚು ಹೆಚ್ಚು ಧ್ಯಾನ, ಪೂಜೆಗಳಲ್ಲೇ ತಮ್ಮನ್ನ ತಾವು ತೊಡಗಿಸಿಕೊಳ್ತಾ ಇದಾರೆ. ಸದ್ಯ ದೇವರ ಮನೆಯಲ್ಲಿ ಕುಳಿತು ಧ್ಯಾನ ಮಾಡ್ತಾ ಇದ್ದ ಫೋಟೊ ಒಂದನ್ನ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ರು, ಅಲ್ಲದೇ ಇವರು ಯಾವುದೇ ಮೂವಿ ಪ್ರಮೋಷನ್‌ಗೆ ಬಂದಾಗ ಅವರ ಕೈಯಲ್ಲಿ ಜಪದ ಮಾಲೆಯನ್ನೂ ಸಹ ಹಿಡಿದು ಬರ್ತಿದ್ರು. ಅನಾರೋಗ್ಯದ ಸಮಸ್ಯೆ ಮತ್ತು ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸದಾ ಪೂಜೆ, ಧ್ಯಾನ, ದೇವರ ಸನ್ನಿಧಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ ಎಂಬುದು ತಿಳಿಯುತ್ತದೆ. ನಟಿ ಸಮಂತಾ `ಶಾಕುಂತಲಂ’ ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಜೊತೆಯಲ್ಲೇ ಚಿತ್ರತಂಡದ ಜೊತೆ ಹೈದರಾಬಾದ್‌ನ ಪ್ರಸಿದ್ಧ ದೇವಸ್ಥಾನ ಪೆದ್ದಮ್ಮ ತಲ್ಲಿ ದೇವಿಗೆ ಸೀರೆ ಜೊತೆ ಗಾಜಿನ ಬಳೆಯನ್ನ ಅರ್ಪಣೆ ಮಾಡಿ ಆಶೀರ್ವಾದ ಪಡೆದು ಬಂದಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply