ಸಲಿಂಗ ವಿವಾಹ ಕೂಡ ಸಮಾಜದ ಒಂದು ಭಾಗ: ಸುಪ್ರೀಂಕೋರ್ಟ್‌

masthmagaa.com:

ಸಲಿಂಗ ದಂಪತಿಗಳ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಆಡಳಿತಾತ್ಮಕ ಕ್ರಮಗಳನ್ನು ಕಂಡುಕೊಳ್ಳಲು ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಅಂತ ಕೇಂದ್ರ ಸರ್ಕಾರ ಸುಪ್ರೀಕೋರ್ಟ್‍ಗೆ ತಿಳಿಸಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕುರಿತ ಕೇಸ್‌ ಸಂಬಂಧಿಸಿದ ವಿಚಾರಣೆಯನ್ನ ಸುಪ್ರೀಂಕೋರ್ಟ್‌ ನಡೆಸುತ್ತಿದೆ. ಈ ವೇಳೆ ಸಲಿಂಗ ದಂಪತಿಗಳ ಅಸ್ತಿತ್ವವನ್ನ ಇಂಪೋರ್ಟ್‌ ಮಾಡಿಕೊಂಡಿಲ್ಲ ಅಂದ್ರೆ ಬೇರೆ ಎಲ್ಲಿಂದಲೋ ತಗೊಂಡ್‌ ಬಂದಿಲ್ಲ. ಅದು ಕೂಡ ಸಮಾಜದ ಒಂದು ಭಾಗವಾಗಿದೆ ಅಂತ ಸಿಜೆಐ ಡಿ .ವೈ ಚಂದ್ರಚೂಡ್‌ ಅವ್ರು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನ ಮೇ 9ರಂದು ನಡೆಸಲಾಗುತ್ತೆ ಅಂತ ಸುಪ್ರೀಂಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply