“ಸಲಿಂಗ ವಿವಾಹ ಅಪರಾಧವಲ್ಲ, ಅಗತ್ಯ” : ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ

masthmagaa.com:

ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಅರ್ಜಿ ಕುರಿತು ವಿವೇಕ್‌ ಅಗ್ನಿಹೋತ್ರಿ ಟ್ವೀಟ್‌ ಮಾಡಿದ್ದಾರೆ.

ಸಲಿಂಗ ವಿವಾಹಗಳ ಕುರಿತು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ ವಿವೇಕ್‌ ಅಗ್ನಿಹೋತ್ರಿ “ಸಲಿಂಗ ವಿವಾಹವು ಬರೀ ನಗರದಲ್ಲಿ ಇರುವಂತ ಜನರ ಆಲೋಚನೆ ಅಲ್ಲ. ಇದು ಮಾನವ ಅಗತ್ಯ. ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಿಗೆ ಎಂದಿಗೂ ಹೋಗದೇ ಇರುವವರು ಸಲಿಂಗ ವಿವಾಹ ನಗರ ಪ್ರದೇಶದಲ್ಲಷ್ಟೇ ಇರತ್ತೆ ಅಂತ ಅಂದ್ಕೊಂಡಿರಬಹುದು ಅಥವಾ ಮುಂಬೈನಲ್ಲಿ ಇರತ್ತೆ ಅಂತ ಯೋಚಿಸಿರಬಹುದು. ಮೊದಲನೆಯದಾಗಿ, ಸಲಿಂಗ ವಿವಾಹ ಒಂದು ಪರಿಕಲ್ಪನೆಯಲ್ಲ. ಇದು ಅಗತ್ಯವಾಗಿದೆ, ಇದು ಹಕ್ಕು. ಮತ್ತು ಭಾರತದಂತಹ ಪ್ರಗತಿಪರ, ಉದಾರ ಮತ್ತು ನಮ್ಮ ನಾಗರಿಕತೆಯಲ್ಲಿ, ಸಲಿಂಗ ವಿವಾಹ ಸಾಮಾನ್ಯವಾಗಿರಬೇಕು, ಅಪರಾಧವಲ್ಲ.” ಎಂದು ಟ್ಟೀಟ್‌ ಮಾಡಿದ್ದಾರೆ.

ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಕೂಡ ಈ ಬಗ್ಗೆ ಟ್ಟೀಟ್‌ ಮಾಡಿದ್ದಾರೆ. “ಸುಪ್ರೀಂ ಕೋರ್ಟ್‌ಗೆ ಬನ್ನಿ! ಸಲಿಂಗ ವಿವಾಹದ ಹಾದಿಯನ್ನ ಸುಗಮಗೊಳಿಸಿ. ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸಿ” ಎಂದು ಟ್ವೀಟ್ ಮಾಡಿದ್ದಾರೆ. ಸಲಿಂಗಕಾಮಿ ದಂಪತಿಗಳ “ಮಾಡರ್ನ್‌ ಲವ್‌” ಎನ್ನುವ ಪ್ರೇಮಕಥೆಯನ್ನು ನಿರೂಪಿಸುವ ವೆಬ್‌ ಸಿರೀಸ್‌ನ್ನ 2022ರಲ್ಲಿ ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದರು.

-masthmagaa.com

Contact Us for Advertisement

Leave a Reply