ಸಂದೇಶ್‌ಖಾಲಿ ಖಳನಾಯಕ ಅಂದರ್‌! TMCಯಿಂದ ಕಿಕ್‌ಔಟ್‌!

masthmagaa.com:

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣ ಸಂಬಂಧ ಇದೀಗ TMC ನಾಯಕ ಶೇಖ್‌ ಶಹಜಹಾನ್‌ ಅವ್ರನ್ನ ಫೆಬ್ರುವರಿ 28 ರಂದು ಅರೆಸ್ಟ್‌ ಮಾಡಲಾಗಿದೆ. ಅಲ್ಲದೆ ಅಲ್ಲಿನ ಸ್ಥಳೀಯ ಕೋರ್ಟ್‌ ಅವ್ರನ್ನ 10 ದಿನಗಳ ಪೊಲೀಸ್‌ ಕಸ್ಟಡಿಗೆ ಕಳುಹಿಸಿದೆ. ಈ ಕೇಸ್ ಕುರಿತು ನಿರೀಕ್ಷಣಾ ಜಾಮೀನು ಅರ್ಜಿಯನ್ನ ಇದೀಗ ಶಹಜಹಾನ್‌ ಅವ್ರ ವಕೀಲರು ಕೊಲ್ಕತ್ತಾ ಕೋರ್ಟ್‌ ಮುಂದಿಟ್ಟಿದ್ರು. ಆದ್ರೆ ಕೋರ್ಟ್ ಶಹಜಹಾನ್‌ ಅರ್ಜಿಯನ್ನ ತಿರಸ್ಕರಿಸಿ ವಿಚಾರಣೆಗೆ ಮುಂದಿನ ಸೋಮವಾರ ಬರುವಂತೆ ಸೂಚಿಸಿದೆ. ಅಷ್ಟೇ ಅಲ್ದೇ ʻಇಂತಹ ವ್ಯಕ್ತಿಯ ಮೇಲೆ ಯಾವ್ದೇ ರೀತಿ ಸಹಾನುಭೂತಿ ನಮಗಿಲ್ಲʼ ಅಂತೇಳಿದೆ. ಇದ್ರ ಬೆನ್ನಲ್ಲೇ ಇದೀಗ TMC ಪಕ್ಷ ಶೇಖ್‌ ಶಹಜಹಾನ್‌ಗೆ ಶಾಕ್‌ ಕೊಟ್ಟಿದೆ. 6 ವರ್ಷಗಳ ಕಾಲ ಅವ್ರನ್ನ TMC ಪಕ್ಷದಿಂದ ಅಮಾನತು ಮಾಡಲಾಗಿದೆ. ಕೋರ್ಟ್‌ ಶಿಕ್ಷೆ ವಿಧಿಸೋ ಮೊದಲೇ TMC ಪಕ್ಷದವ್ರು ತಮ್ಮ ನಾಯಕನಿಗೆ ಶಿಕ್ಷೆ ನೀಡಿದ್ದಾರೆ. ಇನ್ನು ಶಹಜಹಾನ್‌ ಅರೆಸ್ಟ್‌ ಆಗ್ತಿದ್ದಂತೆ ಸಂದೇಶ್‌ಖಾಲಿನಲ್ಲಿ ಸಂಭ್ರಮ ಮನೆಮಾಡಿದೆ. ಅಲ್ಲಿನ ಮಹಿಳೆಯರು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ. ಅಂದ್ಹಾಗೆ ಈ ಶೇಖ್‌ ಶಹಜಹಾನ್‌ ಸಂದೇಶ್‌ಖಾಲಿಯಲ್ಲಿರೋ ಹಳ್ಳಿ ಜನರಿಗೆ ಸಿಕ್ಕಾಪಟ್ಟೆ ಟಾರ್ಚರ್‌ ಕೊಟ್ಟಿದ್ರು. ಅಕ್ರಮವಾಗಿ ಅಲ್ಲಿನ ಜನರ ಭೂಮಿಯನ್ನ ಕಬಳಿಸ್ಕೊಂಡು.. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪದ ಮೇಲೆ ಶಹಜಹಾನ್‌ರನ್ನ ಅರೆಸ್ಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply