ಸಾನಿಯಾ ಮಿರ್ಜಾ ಡಿವೋರ್ಸ್‌! ಖಚಿತಪಡಿಸಿದ ಮಿರ್ಜಾ ಫ್ಯಾಮಿಲಿ!

masthmagaa.com:

ಭಾರತೀಯ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್‌ ಕ್ರಿಕೆಟಿಗ ಶೋಯಬ್‌ ಮಲಿಕ್‌ರ ಡಿವೋರ್ಸ್‌ ಬಗ್ಗೆ ಮಿರ್ಜಾ ಫ್ಯಾಮಿಲಿ ಕನ್ಫರ್ಮ್‌ ಮಾಡಿದೆ. ʻಸಾನಿಯಾ ಯಾವತ್ತೂ ಅವ್ರ ಪರ್ಸನಲ್‌ ಲೈಫ್‌ನ್ನ ಪಬ್ಲಿಕ್‌ನಿಂದ ದೂರವಿಡ್ತಿದ್ರು. ಆದ್ರೆ ಇದೀಗ ಸಾನಿಯಾ ಮತ್ತು ಶೋಯಬ್‌ ಡಿವೋರ್ಸ್‌ ಪಡೆದಿರೋ ವಿಚಾರ ಶೇರ್‌ ಮಾಡಲೇಬೇಕಾಯ್ತು. ಇವ್ರಿಬ್ರ ನಡುವೆ ಕೆಲ ತಿಂಗಳ ಹಿಂದೆ ಡಿವೋರ್ಸ್‌ ಆಗಿತ್ತು. ಶೋಯಬ್‌ನ ಮುಂದಿನ ಜೀವನಕ್ಕೆ ಒಳ್ಳೆಯದಾಗ್ಲಿ ಅಂತ ಸಾನಿಯಾ ಆಶಿಸ್ತಾರೆʼ ಅಂತ ಮಿರ್ಜಾ ಫ್ಯಾಮಿಲಿ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಸಾನಿಯಾ ಮಿರ್ಜಾ ಕೂಡ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿನಲ್ಲಿ ಈ ಕುರಿತು ಪೋಸ್ಟ್‌ ಒಂದನ್ನ ಹಾಕಿದ್ದಾರೆ. ಈ ಎಲ್ಲದ್ರ ನಡುವೆ ಇದೀಗ `X’ ನಲ್ಲಿ ಪಾಕಿಸ್ತಾನಿ ಜನರು ಸಾನಿಯಾ ಮಿರ್ಜಾ ಅವ್ರಿಗೆ ಸಾಕಷ್ಟು ಬೆಂಬಲವನ್ನ ನೀಡ್ತಿದಾರೆ. ಅಂದ್ಹಾಗೆ ಇವ್ರಿಬ್ರು ಏಪ್ರಿಲ್‌ 2010ರಂದು ಹೈದರಾಬಾದ್‌ನಲ್ಲಿ ಮದುವೆ ಆಗಿದ್ರು. ಇದೀಗ ಇವ್ರಿಗೆ 5 ವರ್ಷದ ಮಗ ಕೂಡ ಇದ್ದಾನೆ.

-masthmagaa.com

Contact Us for Advertisement

Leave a Reply