ಕೆಜಿಎಫ್ ಟೀಂ ಜೊತೆ ಸೇರಿಕೊಂಡ ಮುನ್ನಾಭಾಯ್..!

ಕೆಜಿಎಫ್ ಚಾಪ್ಟರ್-1 ಹೇಗೆಲ್ಲಾ ಸದ್ದು ಮಾಡಿತ್ತು ಅನ್ನೋದನ್ನ ನೀವು ನೋಡಿದ್ರಿ. ಈಗ ಕೆಜಿಎಫ್ ಚಾಪ್ಟರ್-2 ಸಿನಿಮಾ ಶೂಟಿಂಗ್ ಹೈದ್ರಾಬಾದ್‍ನಲ್ಲಿ ಭರ್ಜರಿಯಾಗಿ ನಡೀತಿದೆ. ಇದ್ರಲ್ಲಿ ಅಧೀರನ ಪಾತ್ರದಲ್ಲಿ ಬಾಲಿವುಡ್ ಮುನ್ನಭಾಯ್ ಸಂಜಯ್ ದತ್ ನಟಿಸ್ತಿದ್ದಾರೆ. ಇಂದು ಮುನ್ನಾಭಾಯ್ ಹೈದ್ರಾಬಾದ್‍ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ಅಧೀರ ಎಂಟ್ರಿಯೊಂದಿಗೆ ಈ ಮಹಾಕಾವ್ಯ ಹೇಗೆ ಅಂತ್ಯಗೊಳ್ಳುತ್ತೆ ಅನ್ನೋದನ್ನ ನೋಡೋಣ ಎಂದಿದ್ದಾರೆ. ಸಂಜಯ್ ದತ್ ಅವರ ಜನ್ಮದಿನದಂದು ಕೆಜಿಎಫ್ ಚಿತ್ರತಂಡ ಅಧೀರನ ಫಸ್ಟ್‍ಲುಕ್ ರಿಲೀಸ್ ಮಾಡಿತ್ತು.

https://twitter.com/prashanth_neel/status/1176751556357574656

Contact Us for Advertisement

Leave a Reply