ಮಹಾರಾಷ್ಟ್ರದಲ್ಲಿ ಎನ್​ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾ ಶಿವಸೇನೆ..?

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಾ..? ಇಲ್ವಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಇವತ್ತು ಪುನಃ ಶಿವಸೇನೆ ನಾಯಕ ಸಂಜಯ್ ರಾವತ್​ ಬಿಜೆಪಿಗೆ ಚುನಾವಣೆಗೂ ಮುನ್ನ ಮಾಡಿಕೊಂಡಿದ್ದ 50-50 ಫಾರ್ಮುಲಾವನ್ನು ನೆನೆಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ 50-50 ಫಾರ್ಮುಲಾ ಫಾಲೋ ಮಾಡಬೇಕು. ಅಂದ್ರೆ ಕ್ಯಾಬಿನೆಟ್​​ನಲ್ಲಿ ಸರಿಸಮಾನವಾಗಿ ಸ್ಥಾನಮಾನ ನೀಡಬೇಕು ಅಂದ್ರು. ಅಲ್ಲದೆ ರಾಜಕೀಯದಲ್ಲಿ ಹಲವಾರು ದಾರಿಗಳಿರುತ್ತವೆ ಅನ್ನೋ ಮೂಲಕ ಎನ್​​ಸಿಪಿ ಜೊತೆ ಹೋಗೋ ಸೂಚನೆ ಕೂಡ ಕೊಟ್ಟಿದ್ದಾರೆ.

ಹರಿಯಾಣದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ಆದ್ರೂ ಅವರು ಅವರಿಗೆ ವಿರುದ್ಧವಾದ ಸಂಘಟನೆ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ತಡವಾಗುತ್ತಿದೆ ಅಂದ್ರೆ ಅದರಲ್ಲಿ ನಮ್ಮದೇನೂ ತಪ್ಪಿಲ್ಲ. ನಾವು ಈವರೆಗೆ ಎನ್​​ಸಿಪಿ ಬೆಂಬಲ ಪಡೆಯೋ ಬಗ್ಗೆ ಯೋಚಿಸಿಲ್ಲ. ಆದ್ರೆ ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಸಂಜಯ್ ರಾವತ್​​, ನಮಗೆ ಅಧಿಕಾರದ ದಾಹವಿಲ್ಲ. ಹೇಳಿದಂತೆ ನಡೆದುಕೊಳ್ಳಬೇಕು ಅಷ್ಟೆ. ಅದರಂತೆ ಕ್ಯಾಬಿನೆಟ್​​ನಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕು. ನಮಗೆ ಯಾಕೆ ಎರಡೂವರೆ ವರ್ಷಗಳ ಕಾಲ ಸಿಎಂ ಹುದ್ದೆ ನೀಡಬಾರದು ಅಂತ ಪ್ರಶ್ನಿಸಿದ್ರು.

Contact Us for Advertisement

Leave a Reply