ವಿಶ್ವನಾಥ್​, ಸಾರಾ ವಾಗ್ಯುದ್ಧ..! ಚಾಮುಂಡಿ ಮೇಲೆ ಪ್ರಮಾಣದವರೆಗೂ ಬಂತು..!

ಮೈಸೂರು: ಸ್ವಲ್ಪ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ಸಾ.ರಾ ಮಹೇಶ್ ಮತ್ತು ಹಳ್ಳಿ ಹಕ್ಕಿ ವಿಶ್ವನಾಥ್ ಮಾತಿನ ಯುದ್ಧ ಮತ್ತೆ ಶುರುವಾಗಿದೆ.  ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಹೆಚ್​​.ವಿಶ್ವನಾಥ್​​​​​, ನಾನು ಹಣ ಪಡೆದಿದ್ದೇನೆ ಎಂದು ಸಾರಾ ಮಹೇಶ್ ಆರೋಪಿಸಿದ್ದಾರೆ. ನಾನು ಚಾಮುಂಡಿ ಬೆಟ್ಟಕ್ಕೆ ಬರಲು ಸಿದ್ಧ. ನಾನು ಹಣ ಪಡೆದಿದ್ದಲ್ಲಿ ಕೊಟ್ಟವರು ಯಾರಾದ್ರೂ ಇರಲೇಬೇಕಲ್ವಾ..? ನಾನು ಬರುತ್ತೇನೆ. ಅವರೂ ಬರಲಿ ಎಂದು ಹೇಳಿದ್ದರು.

ಇಂದು ಸುದ್ದಿಗೋಷ್ಠಿ ನಡೆಸಿದ ಸಾರಾ ಮಹೇಶ್​, ವಿಶ್ವನಾಥ್ ಸವಾಲನ್ನು ಸ್ವೀಕರಿಸಿದ್ದಾರೆ. ಅಲ್ಲದೆ ನಾನು ಚಾಮುಂಡಿ ಬೆಟ್ಟಕ್ಕೆ ಬರಲು ಸಿದ್ಧನಿದ್ದೇನೆ. ವಿಶ್ವನಾಥ್ ಚಾಮುಂಡಿ ತಾಯಿ ಪಾದದ ಬಳಿ ಬೇಡ, ಗೋಪುರ ಬಳಿ ಬಂದು ತಾವು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಲ್ಲ ಎಂದು ಸಾಬೀತುಪಡಿಸಲಿ ಎಂದು ಸವಾಲ್ ಎಸೆದಿದ್ದಾರೆ. ಒಂದ್ವೇಳೆ ವಿಶ್ವನಾಥ್ ಪ್ರಮಾಣ ಮಾಡಿದ್ದೇ ಆದಲ್ಲಿ, ನಾನು ಬೇಷರತ್ ಇಡೀ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಅಂದ್ರು.

Contact Us for Advertisement

Leave a Reply