ಮಾರಿಯೋಪೋಲ್ ಸ್ಥಿತಿ ಹೇಗಿದೆ? ಉಪಗ್ರಹ ಚಿತ್ರದಲ್ಲಿ ಬಯಲು

masthmagaa.com:

ಯುಕ್ರೇನ್​ನಲ್ಲಿ ಏರ್​​ಸ್ಟ್ರೈಕ್​ನಿಂದ ಡ್ಯಾಮೇಜ್​ ಆಗಿರೋ ಮಾರಿಯೋಪೋಲ್ ಡ್ರಾಮಾ ಥಿಯೇಟರ್​ನ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದೆ. ದಾಳಿಗೂ ಮುನ್ನ ಹೀಗಿದ್ದ ಥಿಯೇಟರ್​.. ದಾಳಿ ಬಳಿಕ ಈಥರ ಆಗೋಗಿದೆ.. ಅಂದ್ಹಾಗೆ ಗುರುವಾರ ದಾಳಿ ನಡೀವಾಗ ಥಿಯೇಟರ್​ ಕೆಳಗೆ ಇದ್ದ ಬಾಂಬ್ ಶೆಲ್ಟರ್​ನಲ್ಲಿ ನೂರಾರು ನಿರಾಶ್ರಿತರು ಆಶ್ರಯ ಪಡ್ಕೊಂಡಿದ್ರು. ಹೀಗಾಗಿ ಯಾರೂ ಪ್ರಾಣ ಕಳ್ಕೊಂಡಿರಲಿಲ್ಲ. ಆದ್ರೆ ದಾಳಿಯಿಂದ ಥೀಯೇಟರ್ ಶೇಪೇ ಹೋಗಿದೆ. ಇದನ್ನ ಮರು ನಿರ್ಮಾಣ ಮಾಡೋದಾಗಿ ಇಟಲಿ ಹೇಳಿದೆ. ದಾಳಿ ಮಾಡಿದ್ದು ರಷ್ಯಾ ಅಂತ ಯುಕ್ರೇನ್​ ದೂರಿದ್ರೆ, ಇದು ನಾವ್ ಮಾಡಿದ್ದಲ್ಲ ಅಂತ ರಷ್ಯಾ ಹೇಳಿತ್ತು.

-masthmagaa.com

Contact Us for Advertisement

Leave a Reply