ಹೆಚ್ಚಿನ ಉಪಗ್ರಹಗಳ ಉಡಾವಣೆಯಿಂದ ಭೂಮಿಗೆ ಗಂಡಾಂತರ!

masthmagaa.com:

ಭೂಮಿಯ ಕಕ್ಷೆಗಳಲ್ಲಿ ಹೆಚ್ಚುತ್ತಿರೋ ಸ್ಯಾಟಲೈಟ್‌ಗಳಿಂದ ಭೂಮಿಗೆ ದೊಡ್ಡ ಗಂಡಾಂತರ ಕಾದಿದೆ ಅನ್ನೋ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ. ಹೆಚ್ಚುತ್ತಿರೋ ಸ್ಯಾಟಲೈಟ್‌ಗಳಿಂದ ಭೂಮಿಯ ಮ್ಯಾಗ್ನೆಟಿಕ್‌ ಫೀಲ್ಡ್‌ಗೆ ತೊಂದರೆಯಾಗಲಿದೆ ಅಂತ ರಿಸರ್ಚ್‌ ಒಂದ್ರಿಂದ ತಿಳಿದಿದೆ. ಐಸ್‌ಲ್ಯಾಂಡ್‌ ಯುನಿವರ್ಸಿಟಿಯ ಸಿಯೇರಾ ಸೋಲ್ಟರ್‌ (Sierra Solter) ಅನ್ನೊ ವಿದ್ಯಾರ್ಥಿ ಈ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಇದ್ರಲ್ಲಿ ಕಳೆದ 3 ದಶಕಗಳಲ್ಲಿ ಲಾಂಚ್‌ ಆಗಿರುವಷ್ಟು ಸ್ಯಾಟಲೈಟ್‌ಗಳು ಕಳೆದ ಒಂದೇ ವರ್ಷದಲ್ಲಿ ಲಾಂಚ್‌ ಆಗಿವೆ. ಅದ್ರಲ್ಲೂ ಇಲಾನ್‌ ಮಸ್ಕ್‌ರ ಸ್ಪೇಸ್‌ಎಕ್ಸ್‌, ಅಮೆಜಾನ್‌ನ ಬ್ಲೂ ಓರಿಜಿನ್, ಓನ್‌ವೆಬ್‌ ಕಂಪನಿಗಳು ಹೆಚ್ಚಿನ ಸ್ಯಾಟಲೈಟ್‌ಗಳನ್ನ ಉಡಾವಣೆ ಮಾಡಿವೆ. ಸ್ಪೇಸ್‌ ಎಕ್ಸ್‌ನ ಸ್ಟಾರ್‌ಲಿಂಕ್‌ ಪ್ರೋಜೆಕ್ಟ್‌ನಲ್ಲಿ ಅತಿ ಹೆಚ್ಚು ಸ್ಯಾಟಲೈಟ್‌ಗಳನ್ನ ಲಾಂಚ್‌ ಮಾಡಲಾಗಿದೆ. ಈ ಸ್ಯಾಟಲೈಟ್‌ಗಳು ಇನ್ನೂ ಹೆಚ್ಚಾದ್ರೆ ಒಂದಕ್ಕೊಂದು ಡಿಕ್ಕಿ ಹೊಡೆಯೋ ಚಾನ್ಸಸ್‌ ಜಾಸ್ತಿ ಇರುತ್ತೆ. ಓಜೋನ್‌ ಪದರದ ಮೇಲೆನೂ ಪರಿಣಾಮ ಬೀರೋ ಚಾನ್ಸಸ್‌ ಹಾಗೂ ಲೈಟ್‌ ಪೊಲ್ಯುಷನ್‌ ಉಂಟು ಮಾಡುತ್ವೆ ಅಂತ ರಿಸರ್ಚ್‌ ಹೇಳಿದೆ.

-masthmagaa.com

Contact Us for Advertisement

Leave a Reply