masthmagaa.com:

ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ಸೌದಿ ಅರೇಬಿಯಾದಲ್ಲಿ ಹೇರಿದ್ದ ಕರ್ಫ್ಯೂವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಸೌದಿ ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ಲಾಜಿಜ್ ಅಲ್-ಸೌದ್ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 23ರಂದು ಸೌದಿ ಅರೇಬಿಯಾದಲ್ಲಿ 21 ದಿನಗಳ ಕಾಲ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಹೇರಲಾಗಿತ್ತು. ಬಳಿಕ ಇದನ್ನ ಮಧ್ಯಾಹ್ನ 3 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ವಿಸ್ತರಿಸಲಾಯ್ತು. ಆದ್ರೆ ರಾಜಧಾನಿ ರಿಯಾಧ್ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಅದನ್ನು 24 ಗಂಟೆಗೆ ವಿಸ್ತರಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಕರ್ಫ್ಯೂ ನಿಯಮವನ್ನ ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದ್ದು ಉಲ್ಲಂಘಿಸಿದವರನ್ನು ಶಿಕ್ಷಿಸಲಾಗುತ್ತಿದೆ. ರಿಯಾಧ್​ನಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಸರ್ಕಾರಿ ಸ್ವಾಮ್ಯದ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಭಾರತೀಯರ ಗುಂಪೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅದೇ ರೀತಿ ದಾರಿಹೋಕರ ಬಳಿ ಹಣ ಕಸಿಯುತ್ತಿದ್ದ, ವಾಹನಗಳನ್ನ ಕದಿಯುತ್ತಿದ್ದವರನ್ನ ಕೂಡ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಜೊತೆಗೆ ಖಾಲಿ ಕಪಾಟನ್ನು ಹೊಂದಿರುವ ಮಳಿಗೆಗಳ ವಿಡಿಯೋ ಶೇರ್ ಮಾಡಿ ಅಂಗಡಿಗಳಲ್ಲಿ ಸರಕುಗಳ ಕೊರತೆ ಉಂಟಾಗಿದೆ ಅಂತ ವದಂತಿ ಹರಡಿದ ವ್ಯಕ್ತಿಯನ್ನ ಬಂಧಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಇದುವರೆಗೆ 4 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ 53 ಮಂದಿ ಮೃತಪಟ್ಟಿದ್ದು, 720 ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

-masthmagaa.com

Contact Us for Advertisement

Leave a Reply