ಲಸಿಕೆ ಹಾಕಿಸಿಕೊಂಡ ವಿದೇಶಿಯರಿಗೆ ಉಮ್ರಾ ಯಾತ್ರೆಗೆ ಅವಕಾಶ: ಸೌದಿ

masthmagaa.com:

ಸೌದಿ ಅರೇಬಿಯಾ ಲಸಿಕೆ ಹಾಕಿಸಿಕೊಂಡಿರೋ ವಿದೇಶಿ ಯಾತ್ರಿಕರು ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿದೆ. ಅಧಿಕಾರಿಗಳು ಇಂದಿನಿಂದ ಭಕ್ತರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ 18 ತಿಂಗಳು ಹಿಂದೆಯೇ ಗಡಿ ಬಂದ್ ಮಾಡ್ಕೊಂಡಿತ್ತು. ಕಳೆದ ತಿಂಗಳು ಹಜ್ ಯಾತ್ರೆ ನಡೆದಾಗಲೂ ಕೇವಲ ಲಸಿಕೆ ಹಾಕಿಸಿಕೊಂಡ 60 ಸಾವಿರ ಮಂದಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದೀಗ ಲಸಿಕೆ ಹಾಕಿಸಿಕೊಂಡ ಎಲ್ಲಾ ವಿದೇಶಿಗರಿಗೆ ಉಮ್ರಾ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಇದೂ ಕೂಡ ಒಂದು ರೀತಿಯ ತೀರ್ಥಯಾತ್ರೆಯೇ ಆಗಿದ್ದು, ವರ್ಷದಲ್ಲಿ ಯಾವ ಸಮಯದಲ್ಲಿ ಬೇಕಾದ್ರೂ ಮಾಡ್ಬೋದು. ಆರಂಭರದಲ್ಲಿ ಸೌದಿ ಪ್ರತಿ ತಿಂಗಳು ಲಸಿಕೆ ಹಾಕಿಸಿಕೊಂಡ 60 ಸಾವಿರ ಮಂದಿಗೆ ಮಾತ್ರ ಅವಕಾಶ ಅಂತ ಹೇಳಿತ್ತು. ಆದ್ರೀಗ ಆ ಸಂಖ್ಯೆಯನ್ನು 20 ಲಕ್ಷಕ್ಕೆ ಹೆಚ್ಚಿಸಿದೆ. ಅಂದ್ರೆ ಪ್ರತಿ ತಿಂಗಳು ಲಸಿಕೆ ಹಾಕಿಸಿಕೊಂಡ 20 ಲಕ್ಷ ಮಂದಿ ಉಮ್ರಾ ಯಾತ್ರೆ ಕೈಗೊಳ್ಳಬಹುದು ಅಂತ ಹೇಳಿದೆ. ಆದ್ರೆ ಇಲ್ಲಿಗೆ ಹೋಗುವವರು ಯಾವ್ಯಾವುದೋ ಲಸಿಕೆ ಹಾಕಿಸಿಕೊಂಡು ಹೋಗುವಂತಿಲ್ಲ. ಸೌದಿಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿರೋ ಲಸಿಕೆಯನ್ನೇ ಹಾಕಿಸಿಕೊಂಡಿರಬೇಕು. ಅಂದಹಾಗೆ ಸೌದಿಯಲ್ಲಿ ಫೈಜರ್, ಆಕ್ಸ್​​ಫರ್ಡ್​ ಅಸ್ಟ್ರಾಜೆನೆಕಾ, ಮಾಡೆರ್ನಾ ಮತ್ತು ಜಾನ್ಸನ್ & ಜಾನ್ಸನ್ ಸಂಸ್ಥೆಯ ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆ ಆಕ್ಸ್​ಫರ್ಡ್​​ ಅಸ್ಟ್ರಾಜನೆಕಾ ಸಂಸ್ಥೆಯದ್ದೇ ಆದ್ರೂ ಕೂಡ ಅದಕ್ಕೆ ಇನ್ನೂ ಸೌದಿಯಲ್ಲಿ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಭಾರತೀಯರಿಗೆ ಪ್ರವೇಶಕ್ಕೆ ಅನುಮತಿ ಕೊಡ್ತಾರಾ ಇಲ್ವಾ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply