ಪಾಕಿಗಳು ಇನ್ಮುಂದೆ ಸೌದಿ ಅರೇಬಿಯಾಗೆ ಹೋಗೋದು ಕಷ್ಟ!

masthmagaa.com:

ಪಾಕಿಸ್ತಾನಿಯರು ಸೌದಿ ಅರೇಬಿಯಾಗೆ ಹೋಗೋದು ತುಂಬಾ ಕಷ್ಟವಾಗ್ಬಿಟ್ಟಿದೆ. ಅಲ್ಲಿ ಭಾರಿ ಸಂಖ್ಯೆಯಲ್ಲಿ ಪಾಕಿಗಳು ಕೆಲಸ ಮಾಡುತ್ತಿದ್ದು, ಹಜ್ ಯಾತ್ರೆಯ ಟೈಂ ಕೂಡ ಬರ್ತಾ ಇದೆ. ಆದ್ರೆ ಚೀನಾದಿಂದ ಪುಗಸಟ್ಟೆಯಾಗಿ ಸಿನೋಫಾರ್ಮ್​ ವ್ಯಾಕ್ಸಿನ್ ತಂದು ಹಾಕಿದ್ದ ಪಾಕ್​​ಗೆ ಅದೇ ಈಗ ಮುಳ್ಳಾಗಿ ಪರಿಣಮಿಸಿದೆ. ಯಾಕಂದ್ರೆ ಪಾಕಿಸ್ತಾನದ ಕುಚಿಕು ಫ್ರೆಂಡ್ ಚೀನಾ ಕೊಟ್ಟ ಸಿನೋಫಾರ್ಮ್​ ಮತ್ತು ಸಿನೋವ್ಯಾಕ್ ಲಸಿಕೆ ಹಾಕಿಸಿಕೊಂಡವರಿಗೆ ಸೌದಿ ಅರೇಬಿಯಾ ಪ್ರವೇಶ ನೀಡ್ತಿಲ್ಲ. ಬರೀ ಅಸ್ಟ್ರಾಜೆನೆಕಾ, ಫೈಜರ್, ಮಾಡೆರ್ನಾ, ಜಾನ್ಸನ್ & ಜಾನ್ಸನ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರವೇ ಗ್ರೀನ್ ಸಿಗ್ನಲ್ ನೀಡಲಾಗಿದೆ. ಯಾಕಂದ್ರೆ ವಿಶ್ವಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದ್ರೂ ಚೀನಾದ ಲಸಿಕೆಗಳು ಪರಿಣಾಮಕಾರಿನಾ ಅನ್ನೋ ಬಗ್ಗೆ ಇನ್ನೂ ಗೊಂದಲಗಳಿವೆ. ಸೌದಿ ಅರೇಬಿಯಾ ಮಾತ್ರವಲ್ಲ. ಮಧ್ಯಪ್ರಾಚ್ಯದ ಹಲವು ದೇಶಗಳು ಚೀನೀ ಲಸಿಕೆಯನ್ನು ನಿರ್ಬಂಧಿಸಿವೆ. ಈಗಾಗಲೇ ನಿಮ್ ನಿರ್ಧಾರದಿಂದ ಬೇಸರ ಆಗಿದೆ ಅಂತ ಪಾಕಿಸ್ತಾನ ಸೌದಿ ಬಳಿ ಅಂಗಲಾಚಿದ್ರೂ ಸೌದಿ ಇನ್ನೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರವಾಗಿ ನಾನು ಮಧ್ಯಪೂರ್ವ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಅಂತ ಖುದ್ದು ಇಮ್ರಾನ್ ಖಾನ್ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ಧಾರೆ ಅಂತ ಪಾಕ್ ಗೃಹಸಚಿವ ಶೇಖ್ ರಶೀದ್ ಹೇಳಿದ್ದಾರೆ. ಜೊತೆಗೆ ಚೀನಾದ ಲಸಿಕೆಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿರೋ ಶೇಖ್ ರಶೀದ್​​, ಲಸಿಕೆ ವಿಚಾರದಲ್ಲಿ ಚೀನಾಗೆ ಸಲ್ಯೂಟ್ ಹೊಡೀತೀವಿ. ಇಡೀ ವಿಶ್ವದಲ್ಲೇ ಹೆಚ್ಚು ಪೂರೈಕೆಯಾಗಿರೋದೇ ಚೀನಾ ಲಸಿಕೆ ಅಂತ ಹೇಳಿದ್ದಾರೆ. ಆದ್ರೆ ವಿದೇಶಾಂಗ ಸಚಿವಾಲಯ ಮಾತ್ರ ನಾವು ಬೇರೆ ಲಸಿಕೆಗಳನ್ನು ತರಿಸಿಕೊಳ್ಳಲು ಅಸಮರ್ಥರಾಗಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply