ಕಶೋಗ್ಗಿಯ ಕೊಲೆಯನ್ನು ಒಪ್ಪಿಕೊಂಡ ಸೌದಿ ರಾಜಕುಮಾರ..!

ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆ ನನ್ನ ಕಣ್ಣ ಮುಂದೆಯೇ ನಡೆದಿದೆ. ಅದರ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಅಂತ ಸೌದಿ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಅಕ್ಟೋಬರ್ 1ಕ್ಕೆ ಜಮಾಲ್ ಕಶೋಗ್ಗಿ ಹತ್ಯೆಯಾಗಿ 1 ವರ್ಷ ಕಳೆಯುತ್ತೆ. ಹೀಗಾಗಿ ಪಿಬಿಎಸ್ ಸುದ್ದಿವಾಹಿನಿ ಡಾಕ್ಯುಮೆಂಟರಿಯನ್ನು ರೆಡಿ ಮಾಡಿದೆ. ಅದರಲ್ಲಿ ಮೊಹ್ಮದ್ ಬಿನ್ ಸಲ್ಮಾನ್ ಈ ಹೇಳಿಕೆ ಕೊಟ್ಟಿದ್ದಾರೆ. ಟರ್ಕಿಯ ಇಸ್ತಾಂಬೂಲ್‍ನಲ್ಲಿರುವ ಸೌದಿ ರಾಯಭಾರಿ ಕಚೇರಿಯಲ್ಲಿ ಜಮಾಲ್ ಕಶೋಗ್ಗಿಯನ್ನು ಹತ್ಯೆಗೈಯ್ಯಲಾಗಿತ್ತು. ಸಿಐಎ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಇದರ ಹಿಂದೆ ಮೊಹ್ಮದ್ ಬಿನ್ ಸಲ್ಮಾನ್ ಕೈವಾಡವಿದೆ. ಅವರ ಆದೇಶದಂತೆಯೇ ಈ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದವು. ಆದ್ರೆ ಸೌದಿ ಅಧಿಕಾರಿಗಳು ಇದನ್ನು ನಿರಾಕರಿಸಿ, ರಾಜಕುಮಾರನ ಯಾವುದೇ ಪಾತ್ರವಿಲ್ಲ ಎಂದಿದ್ದರು. ಅಲ್ಲದೆ 11 ಮಂದಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಐವರಿಗೆ ಮರಣದಂಡನೆಯನ್ನೂ ವಿಧಿಸಲಾಗಿತ್ತು.

Contact Us for Advertisement

Leave a Reply