ಸೌದಿ ರಾಜನ ಹತ್ಯೆಗೆ ಯುವರಾಜ ಎಂಬಿಎಸ್​ ಪ್ಲಾನ್! ಸ್ಫೋಟಕ ಮಾಹಿತಿ

masthmagaa.com:

ಸೌದಿ ಅರೇಬಿಯಾದ ಮಾಜಿ ಗುಪ್ತಚರ ಅಧಿಕಾರಿ ಸಾದ್ ಅಲ್​ಜಬ್ರಿ ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೌದಿ ರಾಜನ ಹುದ್ದೆಗಾಗಿ ಮೊಹ್ಮದ್ ಬಿನ್ ಸಲ್ಮಾನ್ 2014ರಲ್ಲಿ ಕಿಂಗ್​ ಅಬ್ದುಲ್ಲಾರನ್ನು ಹತ್ಯೆ ಮಾಡೋ ಬಗ್ಗೆ ಮಾತಾಡಿದ್ರು ಅಂತ ಹೇಳಿದ್ದಾರೆ. ಆಗ ಮೊಹ್ಮದ್ ಬಿನ್ ಸಲ್ಮಾನ್ ಸರ್ಕಾರದಲ್ಲಿ ಯಾವುದೇ ದೊಡ್ಡ ಹುದ್ದೆಯನ್ನು ಹೊಂದಿರಲಿಲ್ಲ. ನನ್ನ ಬಳಿ ಒಂದು ವಿಡಿಯೋ ಇದೆ. ಅದ್ರಲ್ಲಿ ಸೌದಿ ರಾಜಮನೆತನ ಮತ್ತು ಅಮೆರಿಕದ ಕೆಲವೊಂದು ರಹಸ್ಯಗಳನ್ನು ಒಳಗೊಂಡಿದೆ. ನನ್ ಹತ್ರ ಇರೋ ದಾಖಲೆಗಳಿಂದ ಮೊಹ್ಮದ್ ಬಿನ್ ಸಲ್ಮಾನ್ ಫುಲ್ ಭಯಭೀತರಾಗಿದ್ದಾರೆ. ಹೀಗಾಗಿ ನಾನು ಸಾಯೋದನ್ನು ನೋಡೋವರೆಗೂ ಅವರಿಗೆ ನೆಮ್ಮದಿ ಇರೋದಿಲ್ಲ. ಮೊಹ್ಮದ್ ಬಿನ್ ಸಲ್ಮಾನ್ ಓರ್ವ ಮಾನಸಿಕ ರೋಗಿ, ಕೊಲೆಗಾರ ಅಂತ ಆರೋಪಿಸಿದ್ದಾರೆ. ಆದ್ರೆ ಈ ಆರೋಪಗಳಿಗೆ ಅಲ್ ಜಬ್ರಿ ಯಾವುದೇ ಸಾಕ್ಷ್ಯ ನೀಡಿಲ್ಲ.. ಅಂದಹಾಗೆ ಸದ್ಯ ಅಲ್​ಜಬ್ರಿ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಇವರ ಹಸ್ತಾಂತರಕ್ಕೆ ಸೌದಿ ಸರ್ಕಾರ ಮನವಿ ಮಾಡಿದ್ದು, ಇಂಟರ್​ಪೋಲ್ ನೋಟಿಸ್ ಜಾರಿ ಮಾಡಿದೆ. ಇವರು ಭ್ರಷ್ಟಾಚಾರದ ಆರೋಪದಲ್ಲಿ ಬೇಕಾಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. 2015ರ ಜನವರಿ 23ರವರೆಗೆ ಅಬ್ದುಲ್ಲಾ ಕಿಂಗ್ ಆಗಿದ್ರು. ಇವರ ಬಳಿಕ ಮೊಹ್ಮದ್ ಬಿನ್ ಸಲ್ಮಾನ್​​​ ಅವರ ತಂದೆ ಸಲ್ಮಾನ್ ರಾಜಗದ್ದುಗೆಯನ್ನು ಅಲಂಕರಿಸಿದ್ರು. ಇನ್ನು ಸೌದಿಯ ಮಾಜಿ ಗುಪ್ತಚರ ಅಧಿಕಾರಿ ಸಾದ್ ಅಲ್​​ಜಬ್ರಿ ಅಮೆರಿಕದ ಮಾಧ್ಯಮವೊಂದಕ್ಕೆ 60 ನಿಮಿಷಗಳ ಸಂದರ್ಶನ ನೀಡಿದ್ದಾರೆ. ಅದು ನಿನ್ನೆ ಪ್ರಸಾರವಾಗಿದ್ದು ಭಾರಿ ಸಂಚಲನ ಉಂಟು ಮಾಡಿದೆ.

-masthmagaa.com

Contact Us for Advertisement

Leave a Reply