ಕೇರಳದ ಕಣ್ಣೂರು ವಿವಿ ಪಠ್ಯಕ್ರಮ ಕೇಸರೀಕರಣ ವಿವಾದ ಸ್ಫೋಟ

masthmagaa.com:

ಕೇರಳದ ಕಣ್ಣೂರು ಯುನಿವರ್ಸಿಟಿ ಕೇಸರೀಕರಣ ಪ್ರಯತ್ನ ನಡಿತಿದೆ ಅಂತ ಆರೋಪ ಮಾಡಲಾಗ್ತಿದೆ. ಸಿಲಬಸ್’ನಲ್ಲಿ ಆರೆಸ್ಸೆಸ್ ಹಿರಿಯರಾದ ಮಾಧವ ಸದಾಶಿವ ಗೋಲ್ವಾಲ್ಕರ್ ಹಾಗೂ ಹಿಂದೂ ರಾಷ್ಟ್ರೀಯವಾದಿ ನಾಯಕರಾದ ವಿನಾಯಕ ದಾಮೋದರ್ ಸಾವರ್ಕರ್ ಅವರ ಅಧ್ಯಾಯಗಳನ್ನ ಸೇರಿಸಲಾಗಿದೆ ಅನ್ನೋದು ಈ ಆರೋಪ ಹಾಗೂ ವಿವಾದಕ್ಕೆ ಕಾರಣ. ವಿಶೇಷವಾಗಿ ರಾಜ್ಯಶಾಸ್ತ್ರ ಅಥವಾ ಪೊಲಿಟಿಕಲ್ ಸೈನ್ಸ್ ಪಠ್ಯಕ್ರಮದಲ್ಲಿ ಈ ಅಂಶಗಳನ್ನ ಸೇರಿಸಲಾಗಿದೆ. ಗೋಲ್ವಾಲ್ಕರ್ ಅವರ BUNCH OF THOUGHTS ಹಾಗು WE or Our Nationhood Defined ಪುಸ್ತಕಗಳು, ಹಾಗೇ ಸಾವರ್ಕರ್ ಅವರ Hindutva: Who is a Hindu ಪುಸ್ತಕಗಳಿಂದ ಈ ಅಂಶಗಳನ್ನ ತೆಗೆದುಕೊಳ್ಳಲಾಗಿದೆ. ಇದು ಕೇರಳದಲ್ಲಿ ವಿವಾದವಾಗಿದೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಆಶ್ಚರ್ಯ ಅಂದ್ರೆ ಇಲ್ಲಿ ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐ-ಎಂ ಮೇಲೂ ಆರೋಪಗಳನ್ನ ಮಾಡಲಾಗ್ತಿದೆ. ಕಮ್ಯೂನಿಸ್ಟರು ಸಂಘಪರಿವಾರದೊಂದಿಗೆ ಸೇರಿಕೊಂಡು ಕೇರಳದಲ್ಲಿ ಹಿಂದುತ್ವ ವಿಚಾರಧಾರೆಗಳನ್ನ ಹರಡಲು ಪ್ರಯತ್ನ ಪಡ್ತಿದ್ದಾರೆ ಅಂತ ಆರೋಪ ಮಾಡಲಾಗಿದೆ. ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಇದೆ. ಕಣ್ಣೂರು ಯುನಿವರ್ಸಿಟಿಯನ್ನೂ ಸಿಪಿಐ-ಎಮ್ ಕಂಟ್ರೋಲ್ ಮಾಡ್ತಿದೆ. ಸಿಪಿಐ-ಎಂ ಹಾಗೂ ಆರೆಸ್ಸೆಸ್ ಒಳಗೊಳಗೇ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡೇ ನಿಧಾನಕ್ಕೆ ಕೇರಳದಲ್ಲಿ ಉನ್ನತ ಶಿಕ್ಷಣವನ್ನ ಕೇಸರೀಕರಣ ಮಾಡ್ತಿದ್ದಾರೆ ಅಂತಾ ಯುವ ಕಾಂಗ್ರೆಸ್ ಆರೋಪಿಸಿದೆ. ಆದ್ರೆ ಇದನ್ನ ನಿರಾಕರಿಸಿರೋ ಯುನಿವರ್ಸಿಟಿ ಉಪಕುಲಪತಿ ಗೋಪಿನಾಥ್ ರವೀಂದ್ರನ್, ಸಾಕಷ್ಟು ತಜ್ಞರನ್ನ ಒಳಗೊಂಡ ತಂಡ ಸಿಲಬಸ್ ರೂಪಿಸಿದೆ. ವಿವಿಧ ಚಳವಳಿಗಳನ್ನ ಸೇರಿಸಲಾಗಿದೆ ಅಷ್ಟೆ. ಸ್ವಲ್ಪನಾದ್ರೂ ವಿದ್ಯಾವಂತರಿರೋರು ಇದನ್ನ ಕೇಸರೀಕರಣ ಅನ್ನೋಕೆ ಸಾಧಗ್ಯ ಇಲ್ಲ ಅಂತ ತಿರುಗೇಟು ಕೊಟ್ಟಿದ್ದಾರೆ. ಈ ಮಧ್ಯೆ ಕೇರಳ ಸರ್ಕಾರ ಕೂಡ ಮಧ್ಯಪ್ರವೇಶ ಮಾಡಿದ್ದು, ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಯುನಿವರ್ಇಸಿಟಿಯಿಂದ ಈ ಸಂಬಂಧ ವರದಿ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply