ಇನ್ಫೋಸಿಸ್‌ ಓವರ್‌ಟೇಕ್‌ ಮಾಡಿದ SBI: ಮಾರ್ಕೆಟ್‌ ಕ್ಯಾಪ್‌ನಲ್ಲಿ ದಾಖಲೆ

masthmagaa.com:

ಸಂಪತ್ತಿನ ಲೆಕ್ಕದಲ್ಲಿ ದೇಶದ ಅತಿ ದೊಡ್ದ ಬ್ಯಾಂಕ್‌ SBIಗೆ ಈಗ ಮತ್ತೊಂದು ಕಿರೀಟ ದೊರಕಿದೆ. ಮಾರುಕಟ್ಟೆ ಮೌಲ್ಯದಲ್ಲಿ SBI, ಟೆಕ್‌ ದಿಗ್ಗದ ಕಂಪನಿ ಇನ್ಫೋಸಿಸ್‌ನ್ನ ಬೀಟ್‌ ಮಾಡಿ ಮುಂದೆ ಹೋಗಿದೆ. ಸದ್ಯ ನಿರಂತರ ಏರುಗತಿಯಲ್ಲಿರೋ SBI ಸ್ಕಾಕ್‌ ವ್ಯಾಲ್ಯೂ ಫೆಬ್ರವರಿಯಲ್ಲಿ ಬರೋಬ್ಬರು 20.5% ಏರಿಕೆಯಾಗಿದೆ. 2021ರ ಫೆಬ್ರವರಿಯಲ್ಲಿ SBI ಈ ರೀತಿ ಗಳಿಕೆ ಕಂಡಿತ್ತು… ಈಗ ಮತ್ತೆ ಆ ಟ್ರೆಂಡ್‌ ರಿಪೀಟ್‌ ಆಗಿದೆ. ಕಳೆದ ವಾರವಷ್ಟೇ SBI, LICಯನ್ನ ಬೀಟ್‌ ಮಾಡಿ ಅತ್ಯಂತ ಮೌಲ್ಯಯುತ ಪಬ್ಲಿಕ್‌ ಸೆಕ್ಟರ್‌ ಅಂಡರ್‌ಟೇಕಿಂಗ್‌ ಅನ್ನೋ ಹಿರಿಮೆಗೆ ಪಾತ್ರವಾಗಿತ್ತು. ಇದೀಗ ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ನಲ್ಲಿ ಇನ್ಫೋಸಿಸ್ಸನ್ನ ಓವರ್‌ಟೇಕ್‌ ಮಾಡಿದೆ. ಈಗ ₹6.89 ಲಕ್ಷ ಕೋಟಿ ಮಾರ್ಕೆಟ್‌ ಕ್ಯಾಪ್‌ ಮೂಲಕ, ರಿಲಯನ್ಸ್‌ ಇಂಡಸ್ಟ್ರೀಸ್‌, TCS, HDFC ಬ್ಯಾಂಕ್‌, ICICI ಬ್ಯಾಂಕ್‌ ನಂತರ ಐದನೇ ಅತಿ ಹೆಚ್ಚು ಮಾರ್ಕೆಟ್‌ ಕ್ಯಾಪ್‌ ಇರೋ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

-masthmagaa.com

Contact Us for Advertisement

Leave a Reply