ಚುನಾವಣಾ ಬಾಂಡ್‌ ಸಂಬಂಧ SBI ವಿರುದ್ಧ ಹೊಸ ಅರ್ಜಿ ಸಲ್ಲಿಕೆ!

masthmagaa.com:

ಚುನಾವಣಾ ಬಾಂಡ್‌ಗಳ ವಿಚಾರವಾಗಿ ಇದೀಗ SBIಗೆ ಮತ್ತೊಂದು ತಲೆನೋವು ಎದುರಾಗಿದೆ. SBI ವಿರುದ್ಧ ರೈಟ್‌ ಟು ಇನ್ಫಾರಮೇಷನ್‌ ಆ್ಯಕ್ಟ್‌ (RTI) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇದ್ರಲ್ಲಿ, ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ಎನ್‌ಕ್ಯಾಶ್‌ ಮಾಡೋಕೆ SBI ತನ್ನ ಬ್ರಾಂಚ್‌ಗಳಿಗೆ ನೀಡಿರೋ SOPs ಅಥ್ವಾ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ವಿವರಗಳನ್ನ ರಿವೀಲ್‌ ಮಾಡಿ ಅಂತ ಮನವಿ ಮಾಡಲಾಗಿದೆ. ಆದ್ರೆ SBI ಮಾತ್ರ ಈ ವಿವರಗಳನ್ನ ನೀಡೋಕೆ ನಿರಾಕರಿಸಿದೆ. ʻSOP ವಿವರಗಳು ಬ್ಯಾಂಕ್‌ನ ಆಂತರಿಕ ಮಾರ್ಗಸೂಚಿಗಳಾಗಿವೆ. RTI ಕಾನೂನಿನ ಸೆಕ್ಷನ್‌ 8(1)(d) ಅಡಿಯಲ್ಲಿ ಈ ಮಾಹಿತಿಗಳ ಬಹಿರಂಪಡಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆʼ ಅಂತೇಳಿದೆ.

-masthmagaa.com

Contact Us for Advertisement

Leave a Reply