SBI ಮತ್ತೊಂದು ಸಾಧನೆ! ಇನ್ಫೋಸಿಸ್‌ನ್ನೂ ಹಿಂದಕ್ಕಿದ ಸರ್ಕಾರಿ ಬ್ಯಾಂಕು!

masthmagaa.com:

ದೇಶದ ಅತಿದೊಡ್ಡ ಸಾಲದಾತ, ಸರ್ಕಾರಿ ಒಡೆತನದ ಎಸ್‌ಬಿಐ ಮತ್ತೊಂದು ಸಾಧನೆ ಮಾಡಿದೆ. ಮಾರ್ಕೆಟ್‌ ಕಾಪಿಟಲ್‌ನಲ್ಲಿ ದೇಶದ ಸಾಫ್ಟವೇರ್‌ ದಿಗ್ಗಜ ಇನ್ಫೋಸಿಸ್‌ನ್ನೂ ಮೀರಿ ಈಗ 5ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ಫೆಬ್ರವರಿಯ ಆರಂಭದಿಂದಲೂ ಎಸ್‌ಬಿಐನ ಶೇರುಗಳು ಶೇ20ರಷ್ಟು ಹೆಚ್ಚಿರೋದು ಇದಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಕೆಲದಿನಗಳ ಹಿಂದೆಯಷ್ಟೇ ಎಲ್‌ಐಸಿಯನ್ನ ಹಿಂದಿಕ್ಕುವ ಮೂಲಕ ಎಸ್‌ಬಿಐ ಒಂದು ಮೆಟ್ಟಿಲು ಮೇಲೆ ಬಂದಿತ್ತು. ಸಧ್ಯ 20 ಲಕ್ಷ ಕೋಟಿ ರೂಪಾಯಿ ಮಾರ್ಕೆಟ್‌ ವ್ಯಾಲ್ಯೂ ಹೊಂದಿರೋ ರಿಲಯನ್ಸ್‌ ಇಂಡಸ್ಟ್ರೀಸ್‌ ಮೊದಲ ಸ್ಥಾನದಲ್ಲಿದೆ. ಟಾಟಾ ಕನ್ಸಲ್ಟೆನ್ಸಿ 14 ಲಕ್ಷ ಕೋಟಿ ರೂಪಾಯಿ ಹೊಂದಿ 2ನೇ ಅತಿದೊಡ್ಡ ಕಂಪನಿಯಾಗಿದೆ. ವಿಶೇಷ ಅಂದ್ರೆ ಟಾಪ್‌ 5ರಲ್ಲಿ ಉಳಿದಿರೋ ಇನ್ನು ಮೂರು ಕಂಪನಿಗಳಲ್ಲಿ ಬ್ಯಾಂಕ್‌ಗಳೇ ಇವೆ. ಪಟ್ಟಿಯಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಿರೋ HDFC ಬ್ಯಾಂಕ್‌, 10.9 ಲಕ್ಷ ಕೋಟಿ ವ್ಯಾಲ್ಯೂ ಹೊಂದಿದೆ. ICICI ಬ್ಯಾಂಕ್‌ 7.45 ಲಕ್ಷ ಕೋಟಿ ರೂಪಾಯಿ ಹೊಂದಿ ನಾಲ್ಕನೇ ಸ್ಥಾನದಲ್ಲಿದೆ. ಈಗ 6.89 ಲಕ್ಷ ಕೋಟಿ ರೂಪಾಯಿ ಮಾರ್ಕೆಟ್‌ ವ್ಯಾಲ್ಯೂನೊಂದಿಗೆ 5ನೇ ಸ್ಥಾನ ಪಡ್ಕೊಂಡಿದೆ. ಇನ್ನು 6.87 ಲಕ್ಷ ಕೋಟಿ ರೂಪಾಯಿ ಮೂಲಕ ಇನ್ಫೋಸಿಸ್‌ ಆರನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply