ರಷ್ಯನ್ನರು ಹೊರ ದೇಶಗಳಿಗೆ ದುಡ್ಡು ವರ್ಗಾಯಿಸಂಗಿಲ್ಲ: ಪುಟಿನ್ ಆದೇಶ

masthmagaa.com:

ಇನ್ನು ಸ್ಯಾಂಕ್ಷನ್‌ಗಳ ಏಟಿಗೆ ಪಾತಾಳಕ್ಕೆ ತಲುಪಿರುವ ರುಬೆಲ್‌ ಮೌಲ್ಯವನ್ನು ಮೇಲೆತ್ತಲು ಪುಟಿನ್‌ ರಷ್ಯನ್ನರು ಹೊರದೇಶಗಳಿಗೆ ಹಣ ವರ್ಗಾವಣೆ ಮಾಡದಂತೆ ಬ್ಯಾನ್‌ ಮಾಡಿದ್ದಾರೆ. ಜೊತೆಗೆ ಎಕ್ಸ್‌ಪೋರ್ಟರ್‌ಗಳು ಇನ್ನು ಮುಂದೆ ತಮ್ಮ ರಿಸರ್ವ್ಸ್‌ನ 80% ರುಬೆಲ್‌ನಲ್ಲಿ ಇಟ್ಕೋಬೇಕು ಅಂತ ನಿಯಮ ವಿಧಿಸಿದ್ದಾರೆ. ಇದರಿಂದ ಗಾಜಪ್ರೊಮ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ರುಬೆಲ್‌ನ ಖರೀದಿಸಬೇಕಾಗುತ್ತದೆ. ಪಾಶ್ವೀಮಾತ್ಯ ದೇಶಗಳು ಹಾಕಿರುವ ಆರ್ಥಿಕ ದಿಗ್ಬಂಧನ ರಷ್ಯಾದ ಬ್ಯಾಂಕ್‌ಗಳನ್ನ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಿಂದ ಫ್ರೀಜ್‌ ಮಾಡಿ, ರಷ್ಯಾದ ಕೇಂದ್ರ ಬ್ಯಾಂಕ್‌ ಅದರ ರಿಸರ್ವ್‌ಗಳನ್ನ ಬಳಸದಂತೆ ತಡೆಹಿಡಿಯೋ ನಿಟ್ಟಿನಲ್ಲಿ ಇವೆ.

-masthmagaa.com

Contact Us for Advertisement

Leave a Reply