SBI ನೀಡಿರೋ ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರ ಬಹಿರಂಗ!

masthmagaa.com:

2019ರ ನಂತ್ರದ ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿ ಒದಗಿಸದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವನ್ನ (SBI) ಸುಪ್ರೀಂ ಕೋರ್ಟ್‌ ತರಾಟೆಗೆ ತಗೊಂಡು ಡೆಡ್‌ಲೈನ್‌ ನೀಡಿತ್ತು. ಇದೀಗ ಸುಪ್ರೀಂ ಗಡು ಪಾರು ಮಾಡಿರೋ SBI ಚುನಾವಣಾ ಬಾಂಡ್‌ಗಳ ಸಂಫೂರ್ಣ ಮಾಹಿತಿಯನ್ನ ಇದೀಗ ಚುನಾವಣಾ ಆಯೋಗಕ್ಕೆ ಸಬ್‌ಮಿಟ್‌ ಮಾಡಿದೆ. ಜೊತೆಗೆ ಅಫಿಡವಿಟ್‌ ಸಲ್ಲಿಸಿದೆ. ʻಆಲ್ಪಾನ್ಯುಮರಿಕ್‌ ನಂಬರ್‌ ಸೇರಿದಂತೆ ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿಯನ್ನ ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಲಾಗಿದೆʼ ಅಂತ ತನ್ನ ಅಫಿಡವಿಟ್‌ನಲ್ಲಿ ಸ್ಟೇಟ್‌ಮೆಂಟ್‌ ನೀಡಿದೆ. ಇದೀಗ SBI ನೀಡಿರೋ ಕಂಪ್ಲೀಟ್‌ ಮಾಹಿತಿಯನ್ನ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ಲ್ಲಿ ಪಬ್ಲಿಷ್‌ ಮಾಡಿದೆ.

-masthmagaa.com

Contact Us for Advertisement

Leave a Reply