ಅಣುಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ: EVM ಪರಿಶೀಲಿಸಿ ಅಂದ ಸುಪ್ರೀಂ!

masthmagaa.com:

ವೋಟಿಂಗ್‌ ಮಷಿನ್‌ ವಿಚಾರವಾಗಿ ದೇಶದಲ್ಲಿ ಸಾಕಷ್ಟು ಚರ್ಚೆ ನಡೀತಿರೋ ಹೊತ್ತಲ್ಲೇ EVM ಕೈಕೊಟ್ಟಿರೋ ಘಟನೆ ನಡೆದಿದೆ. ಕೇರಳದ ಕಾಸರಗೋಡಿನಲ್ಲಿ ನಡೆದ ಅಣುಕು ಮತದಾನದ ವೇಳೆ 3 ಇವಿಎಂ ಮಷೀನ್‌ಗಳಲ್ಲಿ ಬಿಜೆಪಿಗೆ 1 ಹೆಚ್ಚುವರಿ ವೋಟ್‌ ಬಿದ್ದಿದೆ. ಸಾಮಾನ್ಯವಾಗಿ ಚುನಾವಣೆಗು ಮುನ್ನ ಪ್ರತಿ ಮತಕ್ಷೇತ್ರದ ಐದು ರ‍್ಯಾಂಡಮ್‌ ಪೋಲಿಂಗ್‌ ಸ್ಟೇಷನ್‌ಗಳಲ್ಲಿ ಈ ಅಣಕು ಮತದಾನ ನಡೆಯುತ್ತೆ. ಅದೇ ರೀತಿ ಕಾಸರಗೂಡಿನಲ್ಲಿ ನಡೆಸಿದಾಗ, 10ರಲ್ಲಿ ಮೂರು EVM ಮಷಿನ್‌ಗಳ VVPATನಲ್ಲಿ ಒಂದೊಂದು ಎಕ್ಸ್‌ಟ್ರಾ ಬಿಜೆಪಿ ಚಿಹ್ನೆ ಇರುವ ಚೀಟಿ ಬಂದಿದೆ. ಎರಡು ರೌಂಡ್‌ ಟೆಸ್ಟ್‌ ಮಾಡಿದಾಗ್ಲೂ ಇದೇ ರೀತಿಯಾಗಿದೆ. ಈ ಚೀಟಿಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಿದ್ದು, ಮೇಲೆ ಚಿಕ್ಕದಾಗಿ ‘not to be counted’ ಅಂತ ಬರೆಯಲಾಗಿದೆ. ಸಾಮಾನ್ಯವಾಗಿ ಮತಎಣಿಕೆ ವೇಳೆ VVPAT ಸ್ಲಿಪ್‌ಗಳನ್ನ ಕೌಂಟ್‌ ಮಾಡಲ್ಲ, ರ‍್ಯಾಂಡಮ್ಮಾಗಿ ತಾಳೆ ನೋಡೊಕೆ ಒಂದಿಷ್ಟು ಕೌಂಟ್‌ ಮಾಡಿರ್ತಾರೆ. ಆದ್ರೆ ಇಕ್ವಲ್‌ ಮತಗಳು ಬಂದಾಗ, ಅಥವಾ ಇನ್ಯಾವುದೇ ಗೊಂದಲ ಇದ್ದಾಗ ಎಲೆಕ್ಟ್ರಾನಿಕ್‌ ಮತಗಳಿಗಿಂತ VVPAT ಸ್ಲಿಪ್‌ಗಳೇ ನಿರ್ಣಾಯಕ ಆಗುತ್ವೆ. ಹೀಗಾಗಿ ಈಗ ಕಾಂಗ್ರೆಸ್‌ ಮತ್ತು LDFನ ಪೋಲಿಂಗ್‌ ಏಜೆಂಟ್‌ಗಳು ಜಿಲ್ಲಾ ಚುನಾವಣಾಧಿಕಾರಿ ಕೂಡ ಆಗಿರೋ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್‌ಗೆ ಕೂಡ ಮುಟ್ಟಿದೆ. ಮೊನ್ನೆ ತಾನೆ ಸುಪ್ರೀಂ ಕೋರ್ಟ್‌ 100% VVPAT ತಾಳೆ ಹಾಕೋದನ್ನ ಒಪ್ಪಿರ್ಲಿಲ್ಲ. ಜೊತೆಗೆ ಮತ್ತೆ ನಾವು ಬ್ಯಾಲಟ್‌ ಪೇಪರ್‌ನತ್ತ ಮುಖಮಾಡೋಕಾಗಲ್ಲ ಅಂತ ಹೇಳಿತ್ತು. ಈಗ ಕಾಸರಗೋಡಿನ ವಿಚಾರವನ್ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸುಪ್ರೀಂ ಕೋರ್ಟ್‌ ಪ್ರಶಾಂತ್‌ ಭೂಷಣ್‌ರ ಆರೋಪವನ್ನ ಗಮನಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಅಲ್ಲದೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರ್ಬೇಕು. ಯಾರಿಗೂ ಆತಂಕ ಬರುವಂತೆ ಇರ್ಬಾರದು ಅಂತ ಆಯೋಗಕ್ಕೆ ಹೇಳಿದೆ.

-masthmagaa.com

Contact Us for Advertisement

Leave a Reply