ದಿ ಕೇರಳ ಸ್ಟೋರಿʼ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ಯಾಕೆ ರಿಲೀಸ್‌ ಮಾಡ್ಬಾರ್ದು ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್‌!

masthmagaa.com:

ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ವಿವಾದಿತ ʻದಿ ಕೇರಳ ಸ್ಟೋರಿʼ ಸಿನಿಮಾವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ದೇಶಾದ್ಯಂತ ರಿಲೀಸ್‌ ಆಗಿರೋ ಈ ಸಿನಿಮಾವನ್ನ ಬಂಗಾಳದಲ್ಲಿ ಯಾಕೆ ಬಿಡುಗಡೆ ಮಾಡ್ಬಾರ್ದು? ಇದು ಕಲಾತ್ಮಕ ಸ್ವಾತಂತ್ರ್ಯ ಅಲ್ವಾ? ಅಂತ ಪ್ರಶ್ನಿಸಿದೆ. ಇದೇ ವೇಳೆ ದೇಶದ ಇತರ ಭಾಗಗಳಲ್ಲಿ ಸಿನಿಮಾ ಬಿಡುಗಡೆ ಆಗಿರೋದನ್ನ ಉಲ್ಲೇಖಿಸಿ, ಪಶ್ಚಿಮ ಬಂಗಾಳ ಬೇರೆ ರಾಜ್ಯಗಳಿಗಿಂತ ಭಿನ್ನ ಏನಲ್ಲ ಅಂತ ಅಲ್ಲಿನ ಸರ್ಕಾರವನ್ನ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇತ್ತ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಜನರ ಪ್ರತಿಕ್ರಿಯೆ ಮುಂದಿಟ್ಟುಕೊಂಡು ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ ಓನರ್‌ಗಳು ಮೂವಿ ಪ್ರದರ್ಶನವನ್ನ ಬ್ಯಾನ್‌ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿತ್ತು, ಇದೀಗ ನ್ಯಾಯಾಲಯ ನೋಟಿಸ್​ ನೀಡಿ, ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದೆ.

-masthmagaa.com

Contact Us for Advertisement

Leave a Reply