ಅಮೆರಿಕ ಯುದ್ಧ‌ ವಾಹನಗಳನ್ನು ಇರಾನ್‌ಗೆ ಕೊಟ್ಟ ತಾಲಿಬಾನ್

masthmagaa.com:

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಿಟ್ಟು ಹೋಗಿರೋ ಯುದ್ಧ ವಾಹನಗಳನ್ನು ತಾಲಿಬಾನಿಗಳು ಇರಾನ್​​ಗೆ ನೀಡಿದ್ದಾರೆ ಅಂತ ವರದಿಯಾಗಿದೆ. ಈ ಯುದ್ಧ ವಾಹನಗಳು ಟೆಹ್ರಾನ್​​ನಲ್ಲಿ ಕಾಣಿಸಿಕೊಂಡಿದೆ. ಅಲ್ಲಿನ ಸೋಷಿಯಲ್ ಮೀಡಿಯಾ ಚಾನಲ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದ್ರಲ್ಲಿ ಅಮೆರಿಕ ಸೇನೆಯ ಯುದ್ಧ ವಾಹನಗಳನ್ನು ಕಾಣಬಹುದಾಗಿದೆ. ಇದು ಅಮೆರಿಕಕ್ಕೆ ಮತ್ತೊಂದು ಹೊಡೆತವಾಗಿದೆ. ಈ ವಾಹನಗಳನ್ನು ಕೆಲವೊಂದು ತಾಂತ್ರಿಕ ಮಾಹಿತಿ ಹೊರತೆಗೆಯಲು ಬಳಸಿದ್ರೆ ಅಥವಾ ಇರಾಕ್​ನಲ್ಲಿ ಅಮೆರಿಕ ಯೋಧರ ಸೋಗಿನಲ್ಲಿ ಓಡಾಡಲು ಅವಕಾಶ ಮಾಡಿಕೊಡಬಹುದು ಅಂತ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ ಅಮೆರಿಕದ ಗುಪ್ತಚರ ಸಂಸ್ಥೆಗೆ ಈ ಬಗ್ಗೆ ಮೊದಲೇ ಗೊತ್ತಿರಲಿಲ್ವಾ..? ಹೀಗೆಲ್ಲಾ ಆಗೋದಿಲ್ಲ ಅಂತ ತಪ್ಪಾಗಿ ಭಾವಿಸಿದ್ದು ಯಾರು ಅಂತ ಸವಾಲುಗಳು ಎದುರಾಗಿವೆ. ಅಂದಹಾಗೆ ಅಫ್ಘಾನಿಸ್ತಾನ ಸೇನೆಗೆ ಈ ಹಿಂದೆ ಅಮೆರಿಕ ಸುಮಾರು 70 ಸಾವಿರದಷ್ಟು ಯುದ್ಧ ವಾಹನಗಳನ್ನು ನೀಡಿತ್ತು. ಇವುಗಳಲ್ಲಿ ಹಮ್​ವೀಸ್​​ ಅಮೆರಿಕ ಸೇನೆಯ ಬೆನ್ನೆಲುಬು ಅಂತಲೇ ಹೇಳಬಹುದು. ಜೊತೆಗೆ ಆರ್ಮೋರ್ಡ್​ ವೆಹಿಕಲ್​ಗಳು ನೆಲದ ಮೇಲೆ ನಡೆಯೋ ದಾಳಿಗಳಿಂದ ಯೋಧರಿಗೆ ರಕ್ಷಣೆಯನ್ನು ನೀಡುತ್ತಿತ್ತು. ಆದ್ರೆ ತಾಲಿಬಾನ್ ಟೇಕೋವರ್ ವೇಳೆ ಇವರೆಲ್ಲವೂ ಅವರ ಪಾಲಾಗಿತ್ತು. ಇವುಗಳ ದೊಡ್ಡ ಪರೇಡ್ ಕೂಡ ನಡೆಸಿದ್ರು ತಾಲಿಬಾನಿಗಳು.

-masthmagaa.com

Contact Us for Advertisement

Leave a Reply