ಈ ಕ್ಷೇತ್ರದಲ್ಲಿ ನಿಂತಿಲ್ಲ ರಷ್ಯಾ-ಅಮೆರಿಕ ಸ್ನೇಹ!

masthmagaa.com:

ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಾಹ್ಯಕಾಶಕ್ಕೆ ಹಾರಿದ್ದ ಮೂವರು ಗಗನಯಾತ್ರಿಗಳು ಭೂಮಿಗೆ ಹಿಂತಿರುಗಿದ್ದಾರೆ. ಸ್ಪೇಸ್‌ ಸ್ಟೇಷನ್​​​ನಿಂದ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಬಂದಿರೋ ಇವರು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಇವರಲ್ಲಿ ರಷ್ಯಾದ ಇಬ್ಬರು ಹಾಗು ಅಮೆರಿಕಾದ ಒಬ್ಬರು ಗಗನಯಾತ್ರಿಗಳು ಸೇರಿದ್ದಾರೆ. ಈ ಮೂಲಕ ಅತಿಹೆಚ್ಚು ಅಂದ್ರೆ ಸುಮಾರು 355 ದಿನ ಬಾಹ್ಯಕಾಶದಲ್ಲಿ ಕಾಲ ಕಳೆದು ಈವರೆಗಿನ ಎಲ್ಲಾ ದಾಖಲೆಗಳನ್ನ ಪುಡಿಗಟ್ಟಿದ್ದಾರೆ. 2016ರಲ್ಲಿ ಸ್ಕಾಟ್‌ ಕಿಲ್ಲಿ ಅನ್ನೋ ಅಮೆರಿಕ‘ ಗಗನಯಾತ್ರಿ ಸುಮಾರು 340 ದಿನ ಬಾಹ್ಯಕಾಶದಲ್ಲಿದ್ದಿದ್ದು ಈವರೆಗಿನ ದಾಖಲೆಯಾಗಿತ್ತು. ಆದ್ರೆ ಇದನ್ನಈಗ ಗಗನಯಾತ್ರಿಗಳಾದ ಆಂಟನ್‌ ಶ್ಕಪ್ಲೆರೊವ್‌ ಹಾಗು ಪ್ಯೋಟ್ರೋ ದುಬ್ರಾವ್‌ ಹಾಗು ಅಮೆರಿಕಾದ ಮಾರ್ಕ್‌ ವಂಡೆ ಹೀಯ್‌ ಮೂವರು ಸೇರಿ ಅಳಿಸಿಹಾಕಿದ್ದಾರೆ. ಅಂದ್ಹಾಗೆ ರಷ್ಯಾ ಹಾಗು ಅಮೆರಿಕಾ ಎಷ್ಟೇ ಕಿತ್ತಾಡಿಕೊಂಡ್ರೂ ಕೂಡ ಬಾಹ್ಯಕಾಶ ಕ್ಷೇತ್ರದಲ್ಲಿ ಮೊದಲಿನಿಂದಲೂ ಅಭೂತಪೂರ್ವ ಸಹಕಾರ ಹೊಂದಿವೆ. ಆದ್ರೆ ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣದಿಂದ ಈ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಅಮೆರಿಕಾ ಮತ್ತು ರಷ್ಯಾ ಪರಸ್ಪರ ಸಹಕಾರ ನೀಡೋದಿಲ್ಲ ಅಂತ ಈಗಾಗಲೇ ಅನೌನ್ಸ್‌ ಮಾಡಿವೆ.

-masthmagaa.com

Contact Us for Advertisement

Leave a Reply