ಗೋಮೂತ್ರದಿಂದ ಹಸಿರುಮನೆ ವಾತಾವರಣವಂತೆ! ದನಗಳಿಗೂ ಟಾಯ್ಲೆಟ್

masthmagaa.com:

ಗೋಮೂತ್ರವನ್ನು ಭಾರತದಲ್ಲಿ ಪವಿತ್ರ ಅಂತ ಭಾವಿಸ್ತಾರೆ. ಆದ್ರೆ ಅದೇ ವಿದೇಶಿ ವಿಜ್ಞಾನಿಗಳು ಗೋಮೂತ್ರ ಜಗತ್ತಿಗೇ ಗಂಡಾಂತರ ಅಂತ ಹೇಳ್ತಿದ್ದಾರೆ..ಅದಕ್ಕಾಗಿಯೇ ಗೋವುಗಳಿಗೆ ನಿಗದಿತ ಟಾಯ್ಲೆಟ್ ರೆಡಿ ಮಾಡಿ, ಟ್ರೇನಿಂಗ್ ನೀಡಿ, ಅವುಗಳು ಅಲ್ಲೇ ಹೋಗಿ ಮೂತ್ರ ವಿಸರ್ಜನೆ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಈ ಭಯಂಕರ ಸಂಶೋಧನೆ ಮಾಡಿರೋದು ನ್ಯೂಜಿಲೆಂಡ್ ಮತ್ತು ಜರ್ಮನಿಯ ಸಂಶೋಧಕರು.. ಗೋಮೂತ್ರ ಎಲ್ಲೆಲ್ಲೋ ನೆಲಕ್ಕೆ ಬಿದ್ರೆ ಅದ್ರಲ್ಲಿರೋ ನೈಟ್ರಿಯಸ್ ಆಕ್ಸೈಡ್ ಮತ್ತು ನೈಟ್ರೇಟ್​ ಆಗಿ ವಿಭಜನೆಯಾಗುತ್ತೆ. ಅದ್ರಲ್ಲಿ ಸೈಟ್ರಿಯಸ್ ಆಕ್ಸೈಡ್ ಗ್ರೀನ್ ಹೌಸ್​ ಗ್ಯಾಸ್​​ಗೆ ಕಾರಣವಾದ್ರೆ, ನೈಟ್ರೇಟ್​ ಮಣ್ಣಿನಲ್ಲಿ ಸೇರಿ ನದಿಗಳನ್ನು ಸೇರುತ್ತೆ. ಹೀಗಾಗಿ ಇಡೀ ಜಗತ್ತಿನಲ್ಲಿ 10ರಿಂದ 20 ಪರ್ಸೆಂಟ್ ಯೂರಿನ್​​​ ಸಂಗ್ರಹಿಸಿದ್ರೂ ದೊಡ್ಡಮಟ್ಟದಲ್ಲಿ ಗ್ರೀನ್​​ ಹೌಸ್ ಗ್ಯಾಸ್ ತಡೆಯಬಹುದು ಅಂತ ಆಕ್ಲೆಂಡ್ ಯುನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ. ಈ ಹಿಂದೆ ಜೋಕ್ ಮೂಲಕ ಶುರುವಾಗಿದ್ದ ಈ ಸಂಶೋಧನೆ ಈಗ ಅರ್ಥಪೂರ್ಣವಾಗಿ ಕೊನೆಯಾಗಿದೆ ಅಂತ ಕೂಡ ಮಾಹಿತಿ ನೀಡಿದ್ದಾರೆ. ಇದ್ನೆಲ್ಲಾ ನೋಡ್ತಿದ್ರೆ ಗೋವುಗಳ ಮೂತ್ರದಿಂದನೇ ಇಷ್ಟೆಲ್ಲಾ ಆಗುತ್ತೆ ಅಂತಾದ್ರೆ ಮನುಷ್ಯರ ಮೂತ್ರದಿಂದ ಇನ್ನು ಏನೆಲ್ಲಾ ತೊಂದರೆ ಆಗ್ಬೋದು.. ಗ್ರೀನ್ ಹೌಸ್​​ ಗ್ಯಾಸ್ ಆಗಲ್ವಾ ಅನ್ನೋ ಪ್ರಶ್ನೆ ಬರುತ್ತೆ. ಅಷ್ಟಕ್ಕೂ ಈ ಗ್ರೀನ್ ಹೌಸ್ ಗ್ಯಾಸ್ ಏನು ಅಂತ ನೋಡೋದಾದ್ರೆ, ನೋಡಿ.. ಈಗ ನಾವು ಸ್ಕ್ರೀನ್​ ಮೇಲೆ ಭೂಮಿ ಮತ್ತು ಸೂರ್ಯನನ್ನು ನೋಡ್ತಾ ಇದ್ದೀವಿ.. ಇದ್ರಲ್ಲಿ ಭೂಮಿಯಿಂದ 18 ಕಿಲೋಮೀಟರ್ ಎತ್ತರದವರೆಗಿನ ವಾತಾವರಣವನ್ನು ಉಷ್ಣವಲಯ ಅಂತ ಕರೆಯಲಾಗುತ್ತೆ. ಈ ಪದರದಲ್ಲಿರೋ ನೈಟ್ರೋಜನ್, ಕಾರ್ಬನ್ ಡೈಆಕ್ಸೈಡ್​​, ಮೀಥೇನ್ ಸೇರಿದಂತೆ ವಿವಿಧ ಅನಿಲಗಳು ಭೂಮಿಯ ಸುತ್ತ ಒಂದು ತಮ್ಮದೇ ಆದ ಪರದೆಯನ್ನು ಸೃಷ್ಟಿಸಿಕೊಳ್ಳುತ್ತವೆ.. ಈ ಪರದೆ ಸೂರ್ಯನಿಂದ ಬಂದ ಕಿರಣಗಳು ಸಂಪೂರ್ಣವಾಗಿ ವಾಪಸ್ ಹೋಗದಂತೆ ತಡೆಯುತ್ತವೆ.. ಈ ಪ್ರಕ್ರಿಯೆ ಭೂಮಿಯನ್ನು ಬೆಚ್ಚಗಿಡೋ ಕೆಲಸ ಮಾಡುತ್ತೆ. ಇದು ಭೂಮಿಗೆ ಅಗತ್ಯ ಕೂಡ. ಯಾಕಂದ್ರೆ ಒಂದ್ವೇಳೆ ಈ ಪ್ರಕ್ರಿಯೆ ನಡೆಯದೇ ಇದ್ದಿದ್ರೆ ಭೂಮಿಯ ತಾಪಮಾನ ಮೈನಸ್ 18 ಡಿಗ್ರಿಯಷ್ಟು ಇರ್ತಾ ಇತ್ತು. ಇಲ್ಲಿ ಯಾವುದೇ ಜೀವಿಗಳಾಗಲೀ, ಗಿಡ ಮರಗಳಾಗಲೀ ಇರಲು ಸಾಧ್ಯವಾಗ್ತಾ ಇರಲಿಲ್ಲ. ಇಡೀ ಭೂಮಿ ಮಂಜುಗಡ್ಡೆಯ ಚೆಂಡಿನಂತೆ ಆಗ್ತಿತ್ತು. ಅದೇ ರೀತಿ ಈ ಹಸಿರುಮನೆ ಪರಿಣಾಮ ಅಥವಾ ಗ್ರೀನ್ ಹೌಸ್ ಎಫೆಕ್ಟ್​ ಲಿಮಿಟ್​​​ಗಿಂತ ಜಾಸ್ತಿ ಕೂಡ ಆಗುವಂತಿಲ್ಲ.. ಅಂದ್ರೆ ಉಷ್ಣ ವಲಯದಲ್ಲಿರೋ ನೈಟ್ರೋಜನ್, ಕಾರ್ಬನ್ ಡೈಆಕ್ಸೈಡ್​​, ಮೀಥೇನ್ ಅನಿಲಗಳ ಪ್ರಮಾಣ ಜಾಸ್ತಿಯಾದಂತೆ ಸೂರ್ಯನ ಕಿರಣಗಳು ವಾಪಸ್ ಹೋಗದಂತೆ ಹೆಚ್ಚಾಗಿ ತಡೆಯುತ್ತವೆ. ಇದರಿಂದ ಹೆಚ್ಚಿನ ಸೂರ್ಯನ ಕಿರಣಗಳು ಭೂಮಿಯ ವಾತಾವರಣದಲ್ಲೇ ಉಳಿದು, ತಾಪಮಾನ ಅಗತ್ಯಕ್ಕಿಂತ ಹೆಚ್ಚು ಜಾಸ್ತಿಯಾಗುತ್ತೆ. ಇದ್ರ ಪರಿಣಾಮ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ತುದಿಯಲ್ಲಿರೋ ಹಿಮಟೊಪ್ಪಿಗಳು ಕರಗಿ ಸಮುದ್ರ ಮಟ್ಟ ಏರಿಕೆಯಾಗಿ, ವಿಶ್ವಾದ್ಯಂತ ದೇಶಗಳ ಕರಾವಳಿ ತೀರ ಮುಳುಗೋ ಅಪಾಯ ಇರುತ್ತೆ.

-masthmagaa.com

Contact Us for Advertisement

Leave a Reply