ಸೂರ್ಯನಿಗೆ ಟಾರ್ಚ್​.. ಫ್ಯೂಷನ್‌ ಎನರ್ಜಿಯಲ್ಲಿ ದಾಖಲೆ ಬರೆದ ವಿಜ್ಞಾನಿಗಳು

masthmagaa.com:

ಬ್ರಿಟನ್‌ ವಿಜ್ಞಾನಿಗಳು ಫ್ಯೂಷನ್‌ ಎನರ್ಜಿ ಉತ್ಪತ್ತಿ ಮಾಡುವಲ್ಲಿ ದಾಖಲೆ ನಿರ್ಮಿಸಿರುವುದಾಗಿ ಘೋಷಣೆ ಮಾಡಿದ್ದಾರೆ. ಆಕ್ಸ್‌ಫರ್ಡ್‌ ಬಳಿಯ ಜಾಯಿಂಟ್‌ ಯುರೋಪಿಯನ್‌ ಟೋರಸ್‌ ಕೇಂದ್ರದಲ್ಲಿ ಪ್ರಯೋಗ ಮಾಡುವಾಗ ವಿಜ್ಞಾನಿಗಳು ಐದು ಸೆಕೆಂಡ್‌ಗಳ ಕಾಲ 59 ಮೆಗಾಜೂಲ್ಸ್‌ ಫ್ಯೂಶನ್‌ ಶಕ್ತಿ ಉತ್ಪತ್ತಿ ಮಾಡಿದ್ದಾರೆ. ಇದರಲ್ಲಿ 35,000 ಮನೆಗಳಿಗೆ ಐದು ಸೆಕೆಂಡ್‌ಗಳ ವಿದ್ಯುತ್‌ ಪೂರೈಸಬಹುದಾಗಿದೆ ಅಂತ ಬ್ರಿಟನ್‌ನ ಅಟಾಮಿಕ್‌ ಎನರ್ಜಿ ಅಥಾರಿಟಿ ತಿಳಿಸಿದೆ. ಸೂರ್ಯ ಕೂಡ ಇದೆ ನ್ಯೂಕ್ಲಿಯರ್‌ ಫ್ಯೂಷನ್‌ ವಿಧಾನದಿಂದ ತಾಪ ಅಥವಾ ಬಿಸಿಲನ್ನು ಉತ್ಪತ್ತಿ ಮಾಡುತ್ತಾನೆ. ಈಗ ಈ ಪ್ರಯೋಗದ ವಿಧಾನವನ್ನೇ ಅನುಸರಿಸಿ ದೊಡ್ಡಮಟ್ಟದಲ್ಲಿ ಶಕ್ತಿಯನ್ನು ಉತ್ಪಾದಿಸುವ ಯೋಜನೆ ದಕ್ಷಿಣ ಫ್ರಾನ್ಸ್‌ನಲ್ಲಿ ನಡೆಯುತ್ತಿದೆ. ಫ್ಯೂಷನ್​ನಿಂದ ವಿದ್ಯುತ್‌ಶಕ್ತಿಯನ್ನು ಉತ್ಪಾದಿಸಿದರೆ ಹವಮಾನ ಬದಾಲವಣೆ ತಡೆಯುವಲ್ಲಿ ದೊಡ್ಡ ಸಹಾಯವಾಗಲಿದೆ. ಯಾಕಂದ್ರೆ ಇದರಲ್ಲಿ ಕಾರ್ಬನ್‌ ಇರೊಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply