SCO ಸಭೆಯಲ್ಲಿ ಜಿನ್‌ಪಿಂಗ್‌, ಪುಟಿನ್‌ ಮುಂದೆ ಮೋದಿ ಹೇಳಿದ್ದೇನು?

masthmagaa.com:

ಉಜ್ಬೇಕಿಸ್ತಾನದಲ್ಲಿ ನಡೀತಿರೋ ಶಾಂಘೈ ಸಹಕಾರ ಗುಂಪಿನ ಶೃಂಗಸಭೆಯಲ್ಲಿ ಮೋದಿ ಮಾತನಾಡಿದ್ದಾರೆ. ಭಾರತದಲ್ಲಿ ಇಂದು 70 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿವೆ. 100ಕ್ಕೂ ಅಧಿಕ ಯೂನಿಕಾರ್ನ್‌ಗಳಿವೆ. ನಾವು ಪ್ರತಿವಲಯದಲ್ಲೂ ಆವಿಷ್ಕಾರವನ್ನ ಬೆಂಬಲಿಸ್ತೇವೆ. ಭಾರತವನ್ನ ಉತ್ಪಾದನಾ ಹಬ್‌ ಆಗಿಸೋಕೆ ಬಯಸ್ತಿದ್ದೇವೆ. SCO ರಾಷ್ಟ್ರಗಳು ಪರಸ್ಪರ ನಂಬಿಕೆಯನ್ನ ಹೊಂದಲು ಭಾರತ ಪ್ರೋತ್ಸಾಹ ನೀಡುತ್ತೆ..ಕೋವಿಡ್ ನಂತರದ ಈ ಯುಗದಲ್ಲಿ, ಆರ್ಥಿಕ ಚೇತರಿಕೆಯಲ್ಲಿ ಹಾಗೂ ಪೂರೈಕೆ ಸರಪಳಿಯನ್ನ ಬಲಪಡಿಸುವ ನಿಟ್ಟಿನಲ್ಲಿ SCOದ ರಚನಾತ್ಮಕ ಪಾತ್ರ ಅಗತ್ಯ ಅಂತ ಹೇಳಿದ್ದಾರೆ. ಜೊತೆಗೆ ಕೋವಿಡ್ ಹಾಗೂ ಯುಕ್ರೇನ್‌ನಲ್ಲಿನ ಯುದ್ಧದ ಕಾರಣಗಳಿಂದಾಗಿ ಜಾಗತಿಕ ಪೂರೈಕೆ ಸರಪಳಿಗೆ ತೊಂದರೆಯಾದ ಬಳಿಕ ಜಗತ್ತಿನಲ್ಲಿ ಆಹಾರ ಹಾಗೂ ಇಂಧನದ ಬಿಕ್ಕಟ್ಟು ಎದುರಾಗಿದೆ. ಇದನ್ನು ನಿವಾರಿಸೋಕೆ ನಾವು ಉತ್ತಮ ಸಂಪರ್ಕ ಹೊಂದುವ ಅಗತ್ಯವಿದೆ ಅಂತ ಪ್ರತಿಪಾದಿಸಿದ್ದಾರೆ. ಇನ್ನು ಸಭೆಯಲ್ಲಿ ತಮ್ಮ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ʻಪಾಕಿಸ್ತಾನದಲ್ಲಿ ಈ ಪರಿ ವಿನಾಶವನ್ನ ನಾನು ನೋಡೇ ಇಲ್ಲ. ಪಾಕಿಸ್ತಾನದ ಈ ಪ್ರವಾಹಕ್ಕೆ ಖಂಡಿತವಾಗಿಯೂ ಹವಾಮಾನ ಬದಲಾವಣೆಯೂ ಕಾರಣ. ಅವೆಲ್ಲಾ ಸೇರಿ ಈಗ ಪಾಕಿಸ್ತಾನವನ್ನ ಸಮುದ್ರದಂತೆ ಮಾಡಿಬಿಟ್ಟಿವೆ ಅಂತ ಹೇಳಿದ್ದಾರೆ. ಇನ್ನು ಪುಟಿನ್‌ ಮಾತನಾಡಿ ʻವಿಶ್ವದ ಅಭಿವೃದ್ದಿಗಾಗಿ ರಷ್ಯಾ ಸುಮಾರು 3 ಲಕ್ಷ ಟನ್‌ ರಸಗೊಬ್ಬರವನ್ನ ಉಚಿತವಾಗಿ ನೀಡೋಕೆ ಸಿದ್ದವಿದೆ ಅಂತ ಹೇಳಿದ್ದಾರೆ. ಇನ್ನು ಮುಂದಿನ ವರ್ಷ ಭಾರತ ಈ ಸಂಘಟನೆಯ ಅಧ್ಯಕ್ಷತೆ ವಹಿಸಲಿದ್ದು ಇದಕ್ಕೆ ಸಂಪೂರ್ಣ ಬೆಂಬಲ ನೀಡೋದಾಗಿ ಚೀನಾ ಮತ್ತು ರಷ್ಯಾ ನಾಯಕರು ಭರವಸೆ ನೀಡಿದ್ದಾರೆ.
ಇನ್ನು ಯುಕ್ರೇನ್‌ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಮುಖಾಮುಖಿ ಭೇಟಿಯಾಗಿ ಪ್ರತ್ಯೇಕ ಮಾತುಕತೆ ಮಾಡಿದ್ದಾರೆ. ಈ ವೇಳೆ ಉಭಯ ದೇಶಗಳ ಸಹಕಾರ ಕುರಿತು ಚರ್ಚೆ ಮಾಡಲಾಗಿದೆ. ಇದ್ರ ಜೊತೆಗೆ ಟರ್ಕಿ ಅಧ್ಯಕ್ಷ ರಿಸೀಫ್‌ ತಾಯಿಪ್‌ ಎರ್ಡೋಹಾನ್‌ರನ್ನ ಕೂಡ ಮೋದಿ ಭೇಟಿಯಾಗಿದ್ದಾರೆ. ಎರಡೂ ದೇಶಗಳ ಸಹಕಾರ ಕುರಿತು ಡಿಸ್ಕಸ್‌ ಮಾಡಿದ್ದಾರೆ. ಇನ್ನು ಎಲ್ಲರ ದೃಷ್ಠಿ ನೆಟ್ಟಿದ್ದು ಮೋದಿ ಹಾಗೂ ಜಿನ್‌ಪಿಂಗ್‌ ನಡುವೆ. ಇಬ್ಬರೂ ಮಾತುಕತೆ ಮಾಡ್ತಾರಾ ಅಂತ. ಆದ್ರೆ ಇಬ್ಬರೂ ಕೂಡ ಹತ್ತಿರ ಹತ್ತಿರ ನಿಂತುಕೊಂಡ್ರೂ ಯಾವುದೇ ಮಾತು ಆಡಿಲ್ಲ.)
ಇನ್ನು ಪ್ರವಾಹದ ಪರಿಸ್ಥಿತಿಯಿಂದ, ಇನ್ನಿತರ ಸಮಸ್ಯೆಗಳಿಂದ ಉಸಿರಾಡೋದಕ್ಕೂ ಕಷ್ಟಪಡ್ತಿರೋ ಪಾಕಿಸ್ತಾನ ಭಾರತದ ವಿಚಾರಗಳಲ್ಲಿ ಮಾತ್ರ ಮೂಗು ತೂರಿಸೋದನ್ನ ಬಿಡೋದಿಲ್ಲ. ಚೀನಾ ಅಧ್ಯಕ್ಷರ ಜೊತೆಗಿನ ಸಭೆಯಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಕಾಶ್ಮೀರ ವಿಚಾರದ ಕುರಿತು ಚರ್ಚೆ ಮಾಡಿದ್ದಾರೆ ಅಂತ ಹೇಳಲಾಗಿದೆ.

 

-masthmagaa.com

Contact Us for Advertisement

Leave a Reply