ಭಾರತ ಫುಲ್ಬಾಲ್‌ನ ಚೀಫ್‌ ಸೆಕ್ರಟ್ರಿಯಾಗಿ ಶಾಜಿ ಪ್ರಭಾಕರನ್‌ ನೇಮಕ!

masthmagaa.com:

ದೆಹಲಿ ಫುಟ್ ಬಾಲ್ ಅಧ್ಯಕ್ಷ ಶಾಜಿ ಪ್ರಭಾಕರನ್ ಅವರನ್ನು ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನ ನೂತನ ಚೀಫ್‌ ಸೆಕ್ರಟ್ರಿಯಾಗಿ ಇಂದು ಆಯ್ಕೆಮಾಡಲಾಗಿದೆ. AIFF ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದಲ್ಲಿ ನಡೆದ ಪುಟ್ ಬಾಲ್ ಹೌಸ್ ನಲ್ಲಿ, ಅಖಿಲ ಭಾರತ ಪುಟ್ ಬಾಲ್ ಫೆಡರೇಶನ್ ನ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದ್ಹಾಗೆ ಫಿಪಾದ ರೀಜಿನಲ್‌ ಡೆವಲಪ್‌ಮೆಂಟ್‌ ಆಫೀಸರ್‌ ಆಗಿ ಕೂಡ ಅನುಭವ ಹೊಂದಿರೋ ಪ್ರಭಾಕರನ್‌ ಅವರ ಹೆಸರನ್ನ ಚೀಫ್ ಸೆಕ್ರಟ್ರಿ ಸ್ಥಾನಕ್ಕೆ ಚೌಬೆ ಸೂಚಿಸಿದರು. ಇದನ್ನ ಎಲ್ಲಾ ಸದಸ್ಯರೂ ಒಪ್ಪಿದ್ದು ಸರ್ವಾನುಮತದಿಂದ ಅವರ ಆಯ್ಕೆಯಾಗಿದೆ ಅಂತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಸುಪ್ರೀಂಕೋರ್ಟ್ ನಿರ್ದೇಶನದಿಂದ ಇದೇ ಮೊದಲ ಬಾರಿಗೆ ಆರು ಮಂದಿ ಮಾಜಿ ಆಟಗಾರರು ಕೂಡ ಸಮಿತಿಯ ಭಾಗವಾಗಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಭಾರತೀಯ ಫುಟ್ ಬಾಲ್ ನ್ನು ಎಲ್ಲರೂ ಒಟ್ಟಾಗಿ ತೆಗೆದುಕೊಂಡು ಹೋಗಲು ಯಾವುದೇ ವೈಯಕ್ತಿಕ ಪ್ರತಿಷ್ಠೆ ಅಡ್ಡಿಯಾಗಬರಾದು, ಯಶಸ್ಸು ಸಾಧಿಸಬೇಕಾದ್ರೆ ಶಿಸ್ತು ಪ್ರಮುಖವಾದ ಅಂಶ ಅಂತ ಕಲ್ಯಾಣ್‌ ಚೌಬೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply