ಮಳಲಿ ಮಸೀದಿ ವಿಚಾರ: ಕೇರಳದ ತಂತ್ರಿ ಹೇಳಿದ್ದೇನು?

masthmagaa.com:

ವ್ಯಾಪಕ ವಿವಾದಕ್ಕೆ ಕಾರಣ ಆಗಿರೋ ಮಳಲಿಯ ಮದನಿ ಮಸೀದಿ ಸ್ಥಳದಲ್ಲಿ ಇವತ್ತು ಕೇರಳದ ತಂತ್ರಿಯೊಬ್ಬರನ್ನ ಕರೆಸಿ ತಾಂಬೂಲ ಪ್ರಶ್ನೆ ನಡೆಸಲಾಗಿದೆ. ಈ ವೇಳೆ ಅವ್ರು ಮಳಲಿ ಮಸೀದಿ ಸ್ಥಳದಲ್ಲಿ ದೇವ್ರು ಇರೋದು ನಿಜ, ಯಾವುದೋ ಒಂದು ಕಾಲದಲ್ಲಿ ಇಲ್ಲಿ ಒಂದು ಮಠ ಇತ್ತು. ಶೈವ-ವೈಷ್ಣವ ವಿವಾದದಿಂದ ಇದು ನಾಶವಾಗಿದೆ. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ಈಗ ದೇವಸ್ಥಾನವನ್ನ ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ ಅಂತ ಹೇಳಿದ್ದಾರೆ. ಇದ್ರ ಬೆನ್ನಲ್ಲೇ ಈಗ ಹಿಂದೂಪರ ಸಂಘಟನೆಗಳು ಮಸೀದಿ ಜಾಗವನ್ನ ನಮಗೆ ಒಪ್ಪಿಸಬೇಕು ಅಂತ ಪಟ್ಟು ಹಿಡಿದಿವೆ. ಇನ್ನು ತಾಂಬೂಲ ಪ್ರಶ್ನೆ ಬಗ್ಗೆ ಪ್ರತಿಕ್ರಿಯಿಸಿರೋ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಅವ್ರು ಬೇಕಾದ್ರೆ ಇದನ್ನ ಅವ್ರ ಮನೇಲಿ ಮಾಡ್ಕೋಳ್ಲಿ. ಈ ಸಮಸ್ಯೆಗಳನ್ನ ಬಗೆಹರಿಸೋಕೆ ಅಧಿಕಾರಿಗಳು ಇದ್ದಾರೆ, ಇಲಾಖೆಗಳು ಇವೆ ಸರ್ಕಾರ ಇದೆ. ಅದನ್ನ ಬಿಟ್ಟು ಖಾಸಗಿಯವ್ರೆಲ್ಲ ಬಂದು ತೀರ್ಮಾನ ಮಾಡಿ ಜನ್ರಲ್ಲಿ ಗೊಂದಲ ಸೃಷ್ಟಿಸಬಾರ್ದು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇಂತವರ ಮೇಲೆ ಕೇಸ್‌ ದಾಖಲಿಸಬೇಕು. ಸಾರ್ವಜನಿಕ ವಿಚಾರದಲ್ಲಿ ಈ ರೀತಿ ಭವಿಷ್ಯ ಹೇಳುವರನ್ನೆಲ್ಲ ಬಂಧಿಸಬೇಕು ಅಂತ ಹೇಳಿದ್ದಾರೆ. ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಮಾತಾಡಿ, ಇದು ಆ ಭಾಗದ ಜನ್ರ ನಂಬಿಕೆ. ನಾವು ಅದನ್ನ ಅಲ್ಲಗಳೆಯಲ್ಲ, ಈಗಾಗಲೇ ಈ ಪ್ರಕರಣ ಕೋರ್ಟ್‌ನಲ್ಲಿ ಇದೆ. ನಾವು ಕಾನೂನು ಸುವ್ಯವಸ್ಥೆ ಕಾಪಾಡ್ತೀವಿ ಅಂತ ಹೇಳಿದ್ದಾರೆ. ಈಗ ಮಳಲಿ ಗ್ರಾಮದಲ್ಲಿ ಭಿಗಿ ಪೋಲಿಸ್‌ ಬಂದೋಬಸ್ತ್‌ ಮಾಡಲಾಗಿದೆ. ಜೊತೆಗೆ ಸ್ಥಳದ ಸುತ್ತ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply