ಭಾರತದ ಗಡಿಯೊಳಗೆ ಚೀನಾದ ಮತ್ತೊಂದು ಎನ್​ಕ್ಲೇವ್ ನಿರ್ಮಾಣ?

masthmagaa.com:

ಚೀನಾ ಭಾರತದ ಗಡಿಯೊಳಗೆ ಅಂದ್ರೆ ಅರುಣಾಚಲ ಪ್ರದೇಶದಲ್ಲಿ 60 ಕಟ್ಟಡಗಳುಳ್ಳ ಮತ್ತೊಂದು ಎನ್​ಕ್ಲೇವ್ ನಿರ್ಮಿಸಿದೆ ಅಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಉಪಗ್ರಹ ಚಿತ್ರವೊಂದರಲ್ಲಿ ಇದು ಬಯಲಾಗಿದೆ. ದಟ್ಟ ಅರಣ್ಯದ ನಡುವೆ ಒತ್ತೊತ್ತಾಗಿ ಹಲವು ಕಟ್ಟಡಗಳಿರೋದನ್ನು ಈ ಉಪಗ್ರಹ ಚಿತ್ರದಲ್ಲಿ ನೋಡಬಹುದಾಗಿದೆ. ಅಂದಹಾಗೆ ಉಪಗ್ರಹ ಚಿತ್ರದ ಪ್ರಕಾರ 2019ರಲ್ಲಿ ಈ ಜಾಗದಲ್ಲಿ ಯಾವುದೇ ಎನ್​ಕ್ಲೇವ್​​ಗಳಿರಲಿಲ್ಲ. ಒಂದು ವರ್ಷದ ಹಿಂದಿನ ಉಪಗ್ರಹ ಚಿತ್ರದಲ್ಲೂ ಈ ಜಾಗದಲ್ಲಿ ಏನೂ ಇಲ್ಲ.. ಆದ್ರೆ ಈಗ ತೆಗೆದಿರೋ ಚಿತ್ರದಲ್ಲಿ ಕಟ್ಟಡಗಳು ಸ್ಪಷ್ಟವಾಗಿ ಕಾಣುತ್ತಿವೆ. ಆ ಎರಡೂ ಚಿತ್ರಗಳು ಸ್ಕ್ರೀನ್​ಮೇಲೆ ಇದೆ ನೀವು ನೋಡಬಹುದು..ಇದೇ ವರ್ಷ ಜನವರಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದೆ ಅಂತ ವರದಿಯಾಗಿತ್ತು. ಇತ್ತೀಚೆಗೆ ಅಮೆರಿಕದ ಪೆಂಟಗನ್ ಬಿಡುಗಡೆ ಮಾಡಿದ್ದ ವರದಿಯಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಗ್ರಾಮದಿಂದ ಈಗ ನಿರ್ಮಾಣವಾಗಿರೋ ಎನ್​ಕ್ಲೇವ್​ 93 ಕಿಲೋಮೀಟರ್ ದೂರದಲ್ಲಿದೆ. ಎಲ್​​ಎಸಿಯಿಂದ ಭಾರತದ ಗಡಿಯೊಳಗೆ 6 ಕಿಲೋಮೀಟರ್ ಒಳಗೆ ನಿರ್ಮಾಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸೇನಾ ಮೂಲಗಳು, ಈ ಚಿತ್ರದಲ್ಲಿ ತೋರಿಸಲಾಗಿರೋ ಪ್ರದೇಶ ಚೀನಾ ಗಡಿಯೊಳಗೆ ಬರುತ್ತೆ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply