ಲೇಹ್‌ನಲ್ಲಿ ಸೆಕ್ಷನ್‌ 144 ಜಾರಿ! ರ‍್ಯಾಲಿಗಳಿಗೆ ನಿಷೇಧ!

masthmagaa.com:

ಲೇಹ್‌ನಲ್ಲಿ ಏಪ್ರಿಲ್‌ 05ರಂದು ಸೆಕ್ಷನ್‌ 144 ಜಾರಿ ಮಾಡಿ ಸಾರ್ವಜನಿಕ ರ‍್ಯಾಲಿಗಳಿಗೆ ನಿಷೇಧ ಹೇರಲಾಗಿದೆ. ಹೀಗಂತ ಲೇಹ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನೌನ್ಸ್‌ ಮಾಡಿದ್ದಾರೆ. ಅಂದ್ಹಾಗೆ ಕ್ಲೈಮೇಟ್‌ ಆಕ್ಟಿವಿಸ್ಟ್‌, ಸೋನಮ್‌ ವಾಂಗ್ಚುಕ್‌ ಅವ್ರು ಏಪ್ರಿಲ್‌ 7ರಂದು ಲಡಾಖ್‌ನ ಚಾಂಗ್ಟಾಂಗ್‌ ಪ್ರದೇಶದಲ್ಲಿ ʻಪಶ್ಮೀನಾ ಮಾರ್ಚ್‌’ ಹಮ್ಮಿಕೊಂಡಿದ್ರು. ಲಡಾಖ್‌ನ ಕುರಿಗಾಹಿಗಳಿಂದ ಅವ್ರ ಹುಲ್ಲುಗಾವಲು ಭೂಮಿಯನ್ನ ಕಸಿದುಕೊಳ್ಳಲಾಗ್ತಿರೋದನ್ನ ಹೈಲೈಟ್‌ ಮಾಡೋಕೆ ಈ ನಡಿಗೆ ಏರ್ಪಡಿಸಲಾಗಿದೆ. ಇದು ಕೂಡ ಲಡಾಖ್‌ಗೆ ವಿಶೇಷ ಸ್ಥಾನಮಾನ ನೀಡೋ ಸೋನಮ್‌ ವಾಂಗ್ಚುಕ್‌ ಅವ್ರ ಆಗ್ರಹದ ಮತ್ತೊಂದು ಭಾಗವಾಗಿದೆ. ಆದ್ರೆ ಈ ಮಾರ್ಚ್‌ಗೆ 2 ದಿನಗಳ ಇರೋ ಮುಂಚೇನೇ ಇದೀಗ ಲಡಾಖ್‌ನಲ್ಲಿ ಸೆಕ್ಷನ್‌ 144 ಹೇರಲಾಗಿದೆ. ಇನ್ನು ಈ ಬಗ್ಗೆ ರಿಯಾಕ್ಟ್‌ ಮಾಡಿರೋ ವಾಂಗ್ಚುಕ್‌ ಅವ್ರು, ಲಡಾಖ್‌ ಜನರಿಗೆ `ಪಶ್ಮೀನಾ ಮಾರ್ಚ್‌’ ಹಮ್ಮಿಕೊಳ್ಬೇಡಿ. ಬದಲಿಗೆ ನೀವೆಲ್ಲಿದ್ದೀರೋ ಅಲ್ಲಿಂದಲೇ ನಿಮ್ಮ ಧ್ವನಿ ಎತ್ತಿ..ಪ್ರತಿಭಟಿಸಿ ಅಂತ ಕರೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply