ಭಾರತಕ್ಕೆ ಹೆದರಿತಾ ಚೀನಾ? ಶ್ರೀಲಂಕಾ ಜೊತೆಗಿನ ಡೀಲ್ ಕ್ಯಾನ್ಸಲ್

masthmagaa.com:
ಶ್ರೀಲಂಕಾದಲ್ಲಿ ಹೈಬ್ರಿಡ್ ಎನರ್ಜಿ ಪ್ಲಾಂಟ್​​ಗಳನ್ನು ನಿರ್ಮಿಸಲು ಮುಂದಾಗಿದ್ದ ಚೀನಾ ತನ್ನ ಪ್ಲಾನ್ ಕೈಬಿಟ್ಟಿದೆ. ಇದೇ ವರ್ಷ ಜನವರಿಯಲ್ಲಿ ಚೀನಾದ ಸಿನೋ ಸೋರ್​ ಹೈಬ್ರಿಡ್ ಟೆಕ್ನಾಲಜಿ ಕಂಪನಿ ಜೊತೆ ಒಪ್ಪಂದವಾಗಿತ್ತು. ಅದ್ರ ಪ್ರಕಾರ ಶ್ರೀಲಂಕಾದ ಮೂರು ದ್ವೀಪಗಳಾದ ಡೆಲ್​​ಫ್ಟ್​​​​​​​​, ನಾಗದೀಪ ಮತ್ತು ಅನಲ್​ತೀವು ದ್ವೀಪಗಳಲ್ಲಿ ಸಿನೋ ಸೋರ್ ಕಂಪನಿ ಹೈಬ್ರಿಡ್ ಎನರ್ಜಿ ಪ್ಲಾಂಟ್​​ಗಳನ್ನು ನಿರ್ಮಿಸಬೇಕಿತ್ತು. ಆದ್ರೀಗ ಥರ್ಡ್​ ಪಾರ್ಟಿಯಿಂದ ದ ಅಪಾಯವಿದೆ ಅಂತ ಹೇಳಿ ಡೀಲ್ ಕ್ಯಾನ್ಸಲ್ ಮಾಡಿದೆ. ಈ ದ್ವೀಪಗಳು ತಮಿಳುನಾಡಿಗೆ ತುಂಬಾ ಹತ್ತಿರದಲ್ಲಿದೆ. ಆದ್ರೆ ಚೀನಾ ಭಾರತದಿಂದಲೇ ಅಪಾಯವಿದೆ ಅಂತ ನೇರವಾಗಿ ಹೇಳಿಲ್ಲ. ಆದ್ರೆ ಹತ್ತಿರದಲ್ಲಿರೋದು ಭಾರತವೇ ಆಗಿರೋದ್ರಿಂದ ಚೀನಾ ಹೇಳಿದ ಆ ಥರ್ಡ್​ ಪಾರ್ಟಿ ಭಾರತವೇ ಆಗಿರಬಹುದು ಅಂತ ತಜ್ಞರು ಅಂದಾಜಿಸಿದ್ದಾರೆ. ಶ್ರೀಲಂಕಾದಲ್ಲಿರೊ ಚೀನಾದ ರಾಯಭಾರಿ ಕಚೇರಿ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದೆ. ಇದ್ರ ಜೊತೆಗೆ ಮಾಲ್ಡೀವ್ಸ್​​​ನ 12 ದ್ವೀಪಗಳಲ್ಲಿ ಸೋಲಾರ್ ಪವರ್ ಪ್ಲಾಂಟ್​​ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿರೋದಾಗಿಯೂ ಮಾಹಿತಿ ನೀಡಿದೆ.
-masthmagaa.com

Contact Us for Advertisement

Leave a Reply