ಬ್ರಿಟನ್‌ ಪ್ರಧಾನಿ ಆಕಾಂಕ್ಷಿ ಲಿಜ್‌ಟ್ರಸ್‌ ವಿರುದ್ದ ಭಾರಿ ಅಸಮಾಧಾನ! ಯಾಕೆ?

masthmagaa.com:

ಬ್ರಿಟನ್‌ ಪ್ರಧಾನಿ ಸ್ಥಾನದ ಆಕಾಂಕ್ಷಿ ಲಿಜ್‌ ಟ್ರಸ್‌ ಫಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರಾನ್‌ ಕುರಿತು ನೀಡಿದ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗ್ತಿದೆ. ಇವರಿಗೆ ಸಂವಾದ ಒಂದರಲ್ಲಿ ಮ್ಯಾಕ್ರಾನ್‌ ಅವರು ಬ್ರಿಟನ್‌ನ ಮಿತ್ರರಾ ಅಥವಾ ಶತ್ರುನಾ ಅಂತ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಲಿಜ್‌ ಟ್ರಸ್‌ ಮ್ಯಾಕ್ರಾನ್‌ ಅವರು ಬ್ರಿಟನ್‌ನ ಮಿತ್ರ ಅಥವಾ ಶತ್ರು ಅನ್ನೋದನ್ನ ಈಗಲೇ ಹೇಳಲಿಕ್ಕಾಗೋದಿಲ್ಲ. ಒಂದು ವೇಳೆ ನಾನು ಪ್ರಧಾನಿಯಾಗಿ ಆಯ್ಕೆಯಾದ್ರೆ ಆಗ ಅವರ ಕೆಲಸ ಕಾರ್ಯ ಅವ್ರು ಕೈಗೊಂಡ ಕಾರ್ಯಗಳನ್ನ ನೋಡಿದ ಮೇಲೆ ಮ್ಯಾಕ್ರಾನ್‌ ನಮ್ಮ ಮಿತ್ರ ಅಥವಾ ಶತ್ರುವೇ ಅನ್ನೋದನ್ನ ನಿರ್ಧರಿಸ್ತೇನೆ ಅಂತ ಹೇಳಿದ್ರು. ನಂತ್ರ ಇದೇ ಪ್ರಶ್ನೆಗೆ ಪ್ರಧಾನಿ ಹುದ್ದೆಯ ಮತ್ತೊಬ್ಬ ಅಭ್ಯರ್ಥಿ ರಿಷಿ ಸುನಾಕ್‌ ಮ್ಯಾಕ್ರಾನ್‌ ಬ್ರಿಟನ್‌ ಸ್ನೇಹಿತ. ನಾನು ಪ್ರಧಾನಿಯಾಗಿ ಆಯ್ಕೆಯಾದ್ರೆ ಫ್ರಾನ್ಸ್‌ ಸೇರಿದಂತೆ ಯುರೋಪ್‌ನೊಂದಿಗೆ ನಮ್ಮ ಸಂಬಂಧವನ್ನ ಮತ್ತಷ್ಟು ಸುಧಾರಿಸಲು ಪ್ರಯತ್ನಿಸುವೇ ಅಂತ ಹೇಳಿದ್ದಾರೆ. ಇನ್ನು ವಿರೋಧ ಪಕ್ಷವಾದ ಲೇಬರ್‌ ಪಾರ್ಟಿ ಮುಖಂಡರು ಟ್ರಸ್‌ ಅವರ ಹೇಳಿಕೆಯನ್ನ ಖಂಡಿಸಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಯಿಸಿರುವ ಮ್ಯಾಕ್ರಾನ್‌ ಯಾರೇ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿ ಬ್ರಿಟನ್‌ ಯಾವತ್ತಿಗೂ ಫ್ರಾನ್ಸ್‌ನ ಮಿತ್ರ ರಾಷ್ಟ್ರವಾಗಿರುತ್ತದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply