ಕೊರೋನಾ ಲಸಿಕೆ ಬೆಲೆ ಬಗ್ಗೆ ಕೇಂದ್ರ ಸರ್ಕಾರದಿಂದ ಅಸ್ಪಷ್ಟ ಸ್ಪಷ್ಟನೆ!

masthmagaa.com:

ಕೊರೋನಾ ಲಸಿಕೆಯ ಬೆಲೆ ಕುರಿತು ಉಂಟಾಗಿದ್ದ ಚರ್ಚೆಗೆ ಕೇಂದ್ರ ಸರ್ಕಾರ ಅಸ್ಪಷ್ಟ ಸ್ಪಷ್ಟನೆ ನೀಡಿದೆ. ಇತ್ತೀಚೆಗಷ್ಟೇ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ 150 ರೂಪಾಯಿಗೆ, ರಾಜ್ಯ ಸರ್ಕಾರಕ್ಕೆ 400 ರೂಪಾಯಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ನೀಡೋದಾಗಿ ತಿಳಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರ ಒಂದೇ ದರ ನಿಗದಿಪಡಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿದ್ವು. ಅದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಕೇಂದ್ರ ಸರ್ಕಾರ, ನಾವು ಸಂಗ್ರಹಿಸಿದ ಲಸಿಕೆಯ ಡೋಸ್​​ಗಳನ್ನು ರಾಜ್ಯ ಸರ್ಕಾರಗಳಿಗೆ ಫ್ರೀಯಾಗೇ ಕೊಡ್ತೀವಿ ಅಂತ ಹೇಳಿದೆ. ಆದ್ರೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆ ಕಂಪನಿಗಳ ಬಳಿ ನೇರವಾಗಿ ಖರೀದಿಸೋದಾದ್ರೆ ಜಾಸ್ತಿ ದುಡ್ಡು ನಿಗದಿಪಡಿಸಿರೋ ಬಗ್ಗೆ ಏನೂ ಸ್ಪಷ್ಟನೆ ನೀಡೇ ಇಲ್ಲ.. ಇನ್ನು ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಅದರ್ ಪೂನಾವಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ಕಡಿಮೆ ದರದ ಲಸಿಕೆ ಅಂದ್ರೆ ಅದು ಕೋವಿಶೀಲ್ಡ್​.. ಖಾಸಗಿ ಆಸ್ಪತ್ರೆಗಳಿಗೆ ನಿಯಮಿತ ಪ್ರಮಾಣದ ಲಸಿಕೆಯನ್ನು ಡೋಸ್​​ಗೆ 600 ರೂಪಾಯಿಯಂತೆ ಮಾರುತ್ತಿದ್ದೇವೆ. ಇತರೆ ಹಲವು ವೈದ್ಯಕೀಯ ವಸ್ತುಗಳ ಬೆಲೆಯ ಮುಂದೆ ಇದು ತುಂಬಾ ಕಡಿಮೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply