ತೆಲಂಗಾಣದ ʻರೈತಬಂಧುʼ ಯೋಜನೆ ನಿಲ್ಲಿಸುವಂತೆ ಆದೇಶಿಸಿದ ಚುನಾವಣಾ ಆಯೋಗ! ಯಾಕೆ?

masthmagaa.com:

ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ನೇತೃತ್ವ ಸರ್ಕಾರದ ʻರೈತ ಬಂಧುʼ ಯೋಜನೆ ನಿಲ್ಲಿಸುವಂತೆ ಭಾರತ ಚುನಾವಣಾ ಆಯೋಗ ಆದೇಶಿಸಿದೆ. ಈ ಯೋಜನೆ ಮೂಲಕ ರೈತರಿಗೆ ನೀಡೋ ಆರ್ಥಿಕ ನೆರವಿನಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗ್ತಿದೆ ಅಂತ ಆಯೋಗ ತಿಳಿಸಿದೆ. ಇದಕ್ಕೂ ಮೊದಲು ಯೋಜನೆಗೆ ಅನುಮತಿ ನೀಡಿದ್ದ ಕೇಂದ್ರ ಚುನಾವಣಾ ಆಯೋಗ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಷರತ್ತು ವಿಧಿಸಿತ್ತು.. ಹೀಗಿದ್ರೂ ಬಿಆರ್‌ಎಸ್‌ ಅಭ್ಯರ್ಥಿ ಸಚಿವ ಟಿ ಹರೀಶ್ ರಾವ್ ಚುನಾವಣಾ ಪ್ರಚಾರಗಳಿಗೆ ಯೋಜನೆಯನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಪ್ರತಿಪಕ್ಷಗಳಿಂದ ದೂರು ದಾಖಲಾದ ಹಿನ್ನೆಲೆ ಯೋಜನೆಗೆ ತಾತ್ಕಾಲಿಕ ತಡೆ ನೀಡಿದೆ. ತೆಲಂಗಾಣದಲ್ಲಿ ನವೆಂಬರ್ 30ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply