ಚೀನಾದಿಂದ ಬರೋ ಪ್ರಯಾಣಿಕರ ಮೂತ್ರ ಪರೀಕ್ಷೆ! ಯಾಕೆ?

masthmagaa.com:

ಚೀನಾದಲ್ಲಿ ಕೋವಿಡ್‌ ಕೇಸ್‌ಗಳು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಹಲವು ದೇಶಗಳು ಚೀನಾದಿಂದ ಬರೋ ವಿಮಾನಗಳ ವೇಸ್ಟ್‌ ವಾಟರ್‌ ಟೆಸ್ಟ್‌ ಮಾಡೋಕೆ ಮುಂದಾಗಿವೆ. ವೇಸ್ಟ್‌ ವಾಟರ್‌ ಅಂದ್ರೆ ವಿಮಾನದ ಶೌಚಾಲಯದಿಂದ ಪ್ರಯಾಣಿಕರ ಮೂತ್ರ ಮಿಶ್ರಿತ ಮಲವನ್ನ ಕಲೆಕ್ಟ್‌ ಮಾಡಿ ಲ್ಯಾಬ್‌ಗೆ ಕಳಿಸಿ ಟೆಸ್ಟ್‌ ಮಾಡಲಾಗುತ್ತೆ. ಇದ್ರಿಂದ ಎಷ್ಟು ಜನಕ್ಕೆ ಕೋವಿಡ್‌ ಸೋಂಕು ತಗುಲಿದೆ ಹಾಗೂ ಕೋವಿಡ್‌ನ ರೂಪಾಂತರಿ ಬಗ್ಗೆ ತಿಳಿಯೋಕೆ ಸಹಾಯವಾಗುತ್ತೆ ಎನ್ನಲಾಗಿದೆ. ಈಗಾಗಲೇ ಬೆಲ್ಜಿಯಂ, ಕೆನಡಾ, ಆಸ್ಟ್ರಿಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಚೀನಾದಿಂದ ಬರೋ ವಿಮಾನಗಳ ವೇಸ್ಟ್‌ವಾಟರ್‌ ಪರೀಕ್ಷೆಗೆ ಮುಂದಾಗಿರೋದಾಗಿ ತಿಳಿಸಿವೆ.

-masthmagaa.com

Contact Us for Advertisement

Leave a Reply