ಶಕ್ತಿ ಯೋಜನೆ ನಿಲ್ಲೋ ಮಾತೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

masthmagaa.com:

ಕಾಂಗ್ರೆಸ್‌ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯನ್ನ ನಿಲ್ಲಿಸಲಾಗುತ್ತೆ ಅನ್ನೊ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ , ರಾಜ್ಯ ಸರ್ಕಾರದ ಶಕ್ತಿ ಯೋಜನೆ ನಮ್ಮ ಸರ್ಕಾರದ ಪೂರ್ಣಾವಧಿವರೆಗೆ ಇರುತ್ತದೆ ಅಂತ ಹೇಳಿದ್ದಾರೆ. ಇದೇ ವೇಳೆ ಈ ಯೋಜನೆ ಎರಡೂವರೆ ವರ್ಷ ಇರುತ್ತೆ, ನಾಲ್ಕು ವರ್ಷ ಇರುತ್ತೆ ಅನ್ನೋದೆಲ್ಲಾ ಅವರವರ ಹೇಳಿಕೆಗಳು ಅಷ್ಟೇ ಅಂತ ವಿಪಕ್ಷಗಳ ಹೇಳಿಕೆಗಳನ್ನ ಅಲ್ಲಗಳೆದಿದ್ದಾರೆ.

-masthmagaa.com

Contact Us for Advertisement

Leave a Reply