ನಮ್ಮನ್ನ ಪ್ರಾಣಿಗಳಂತೆ ನೋಡಲಾಗ್ತಿದೆ: ಶಾಂಘೈ ಕೋವಿಡ್‌ ಸಂತ್ರಸ್ತರು

masthmagaa.com:

ಇಡೀ ಜಗತ್ತಿಗೆ ಕೊರೊನಾವನ್ನ ದಯಪಾಲಿಸಿದ ಚೀನಾದಲ್ಲಿ ಮತ್ತೆ ಈಗ ಕೋವಿಡ್‌ ಹಬ್ತಾ ಇದ್ದು, ಶಾಂಘೈನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಜಿನ್‌ಪಿಂಗ್‌ ಸರ್ಕಾರ ವಿಧಿಸ್ತಾ ಇದೆ. ಕೊರೋನಾ ಪಾಸಿಟಿವ್‌ ಬಂದವ್ರ ಮನೆ ಮುಂದೆ ಹಸಿರು ಬ್ಯಾರಿಕೇಡ್‌ಗಳನ್ನ ಹಾಕ್ತಾ ಇದೆ. ಅದನ್ನ ಅಲ್ಲಿನ ನಿವಾಸಿಗಳು ವಿರೋಧಿಸ್ತಾ ಇದ್ದು, ಪ್ರಾಣಿಗಳ ರೀತಿ ನಮ್ಮನ್ನ ನಡೆಸ್ಕೋತಾ ಇದಾರೆ ಅಂತ ಕಿಡಿಕಾರಿದ್ದಾರೆ. ರಾಯಿಟರ್ಸ್‌ ಪ್ರಕಾರ ಶಾಂಘೈನಲ್ಲಿ ಶನಿವಾರ 40 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಶಾಂಘೈನಲ್ಲಿ ವರದಿಯಾಗಿರೋ ಕೋವಿಡ್‌ ಪ್ರಕರಣಗಳಲ್ಲಿ ನಾಲ್ಕನೇ ಒಂದು ಭಾಗ 60 ವರ್ಷ ‌ಮೇಲ್ಪಟ್ಟ ವಯಸ್ಸಿನವ್ರು, ಮತ್ತು ಅದ್ರಲ್ಲಿ 50% ಜನ ಕೋವಿಡ್‌ ಲಸಿಕೆಯನ್ನ ಹಾಕಿಸ್ಕೊಂಡಿಲ್ಲ ಅಂತ ಅಲ್ಲಿನ ಆರೋಗ್ಯ ಅಧಿಕಾರಿ ಪ್ಯಾಂಗ್‌ ಕ್ಸಿನ್‌ಗುವೋ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply