ಚಿದಂಬರಂ, ಡಿಕೆಶಿ ಆಯ್ತು..ಈಗ ಶರದ್ ಪವಾರ್ ಸರದಿ..?

ಬ್ಯಾಂಕ್ ಹಗರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾಧ್ಯಮಗಳ ಮುಂದೆ ಸ್ಪಷ್ಟನೆ ಕೊಟ್ಟಿದ್ದಾರೆ. ಬ್ಯಾಂಕ್ ಹಗರಣದಲ್ಲಿ ನನ್ನ ಹೆಸರು ಇಸಿಐಆರ್‍ನಲ್ಲಿದೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತೇನೆ. ಇದೇನು ನನಗೆ ಹೊಸತಲ್ಲ. 1980ರಲ್ಲಿ ಯಾವುದೋ ಒಂದು ಹೋರಾಟದ ವೇಳೆ ನನ್ನನ್ನು ಅರೆಸ್ಟ್ ಮಾಡಲಾಗಿತ್ತು ಎಂದಿದ್ದಾರೆ. ಅಲ್ಲದೆ ನನಗೆ ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಮಹಾರಾಷ್ಟ್ರದ ಇತಿಹಾಸ ನಮಗೆ ದೆಹಲಿ ಸರ್ಕಾರದ(ಕೇಂದ್ರ) ಮುಂದೆ ತಲೆಬಾಗುವುದನ್ನು ಹೇಳಿಕೊಟ್ಟಿಲ್ಲ. ನಾನು ಶಿವಾಜಿಯ ಮಾರ್ಗದಲ್ಲಿ ನಡೆಯುತ್ತಿರುವವನು ಅಂತ ಹೇಳಿದ್ದಾರೆ.

Contact Us for Advertisement

Leave a Reply