ಪಾಕ್ ವಿರುದ್ಧ ಮಾತಾಡಿದ್ದು..ನಮೋ ವಿರುದ್ಧ ಅಲ್ಲ: ಶರದ್ ಪವಾರ್

ಪ್ರಧಾನಿ ಮೋದಿ ಡಿಚ್ಚಿ ಹೊಡೆದ ಬೆನ್ನಲ್ಲೇ ಪಾಕ್ ಪರ ಪ್ರೀತಿಯ ಮಾತಾಡಿದ್ದ ಶರದ್ ಪವಾರ್ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಪಾಕಿಸ್ತಾನ ಇಷ್ಟ ಅಂತ ಏನೂ ಹೇಳಿಲ್ಲ. ಪ್ರಧಾನಿ ಮೋದಿಯವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ನನಗೆ ಪಕ್ಕದ ದೇಶದ ಮೇಲೆ ಪ್ರೀತಿ ಇದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ನಾನು ಈ ದೇಶದ ರಕ್ಷಣಾ ಸಚಿವನಾಗಿದ್ದವನು. ನನ್ನ ಬಗ್ಗೆ ಮಾತನಾಡುವ ಮೊದಲು ಪ್ರಧಾನಿ ಮೋದಿ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಪಾಕಿಸ್ತಾನದ ರಾಜಕೀಯ ಮತ್ತು ಸೇನೆಯ ಅಧಿಕಾರಿಗಳು ಭಾರತದ ವಿರುದ್ಧ ತಪ್ಪು ಹೆಳಿಕೆಗಳನ್ನು ನೀಡುತ್ತಿದ್ದು, ರಾಜಕೀಯ ಮಾಡುತ್ತಿದ್ದಾರೆ ಅಂತ ಹೇಳಿದ್ದೆ ಅಷ್ಟೆ. ನಾನು ಪ್ರಧಾನಿ ಮೋದಿಯವರನ್ನು ಟೀಕಿಸಲ್ಲ. ಯಾಕಂದ್ರೆ ಪ್ರಧಾನಿ ಹುದ್ದೆಯ ಗೌರವವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

Contact Us for Advertisement

Leave a Reply