“ಶೆಹನಾಜ್‌ ಗಿಲ್‌ ಮದುವೆ ಆಗಲ್ಲ”!

masthmagaa.com:

ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ನಟಿಸಿದ ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು, ಇದರ ಮಧ್ಯೆಯೇ ಶೆಹನಾಜ್‌ ತಾಯಿಯ ಮಾಜಿ ಪತಿ ಹಳೆಯ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡ್ತಾ ಇದೆ. ಸಿದ್ಧಾರ್ಥ್ ಶುಕ್ಲಾ ಅವರ ಮರಣದ ನಂತರ ನನ್ನ ಮಗಳು ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾಳೆ ಎಂದು ಅವರ ತಂದೆ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಈಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿರುವ ಹಳೆ ವಿಡಿಯೋ ವೈರಲ್‌ ಆಗ್ತಾ ಇದೆ. ಈ ವಿಡಿಯೋದಲ್ಲಿ ಶೆಹನಾಜ್ ಅವರ ತಂದೆ ಸಂತೋಖ್ ಸಿಂಗ್ ಸುಖ್ ಅವರು ತಮ್ಮ ಮಗಳು ಕೆಲಸದ ಮೇಲೆ ಮಾತ್ರ ಹೇಗೆ ಗಮನಹರಿಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಶೆಹನಾಜ್ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾಳೆ ಮತ್ತು ದುಃಖದಿಂದ ಹೊರ ಬರೋಕೆ ತನ್ನನ್ನ ತಾನು ಕೆಲಸದಲ್ಲಿ ತೊಡಗಿಸಿಕೊಳ್ತಾಳೆ ಎಂದು ಹೇಳಿದ್ದಾರೆ. “ಅವಳು ತನ್ನ ಕೆಲಸದ ಬಗ್ಗೆ ತುಂಬಾ ಯೋಚನೆ ಮಾಡ್ತಾ ಇರ್ತಾಳೆ. ಪ್ರತಿದಿನ ಏನಾದರೂ ಹೊಸ ಹೊಸ ಕೆಲಸಗಳನ್ನ ಮಾಡೋಕೆ ಪ್ರಯತ್ನ ಪಡ್ತಾಳೆ. ಸಿದ್ಧಾರ್ಥ್ ಶುಕ್ಲಾ ಅವರ ಮರಣದ ನಂತರ ಆಕೆಗೆ ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ” ಎಂದು ಹೇಳಿದ್ದಾರೆ.

ಇನ್ನೂ ಕಳೆದ ವರ್ಷವೂ ಕೂಡ ರಾಘವ್ ಜೊತೆ ಶೆಹನಾಜ್ ಡೇಟಿಂಗ್ ನಡೆಸುತ್ತಿರುವ ವರದಿಗಳು ಸುದ್ದಿ ಮಾಡಿದ್ದವು. ಆಗ ಶೆಹನಾಜ್‌ ಈ ವದಂತಿಗಳಿಗೆ ಕೋಪದಿಂದ ಪ್ರತಿಕ್ರಿಯಿಸಿ, ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಮಾಧ್ಯಮಗಳು ಪ್ರತಿ ಬಾರಿಯೂ ಏಕೆ ಸುಳ್ಳು ಹೇಳುತ್ತವೆ? ನಾವು ಯಾರೊಂದಿಗಾದರೂ ಸ್ವಲ್ಪ ಕ್ಲೋಸ್‌ ಆದರೆ ಸಾಕು ಸಂಬಂಧ ಕಟ್ಟಿಬಿಡ್ತೀರಾ, ಅದು ನಿಜ ಅಲ್ಲ”. ಅಂತ ಮಾಧ್ಯಮದ ಮುಂದೆ ಹೈಪರ್‌ ಆಗಿದ್ದರು.

-masthmagaa.com

Contact Us for Advertisement

Leave a Reply