ಯುಕ್ರೇನ್‌ ಯುದ್ಧ! ಭಾರತದಲ್ಲೂ ಶೀಘ್ರ ಪೆಟ್ರೋಲ್‌, ಡೀಸೆಲ್‌ ದರ ಕೂಡ ಏರಿಕೆ!

masthmagaa.com:

ಯುಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಸದ್ಯದಲ್ಲಿಯೇ ಪೆಟ್ರೋಲ್‌, ಡೀಸೆಲ್‌ ದರ ಕೂಡ ಏರಿಕೆಯಾಗುವ ಎಲ್ಲಾ ಲಕ್ಷಣ ಕಾಣ್ತಿವೆ. ಈ ಸಂಬಂಧ ಮಾತಾಡಿರೋ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಿ ಹರ್ದೀಪ್‌ ಸಿಂಗ್‌ ಪುರಿ, ತೈಲ ಬೆಲೆಯನ್ನ ಜಾಗತಿಕ ದರಗಳು ನಿರ್ಧರಿಸುತ್ತವೆ. ಅಲ್ಲಿ ಯುದ್ಧದ ಪರಿಸ್ಥಿತಿ ಇದೆ, ನಾವು ಜನರ ಹಿತದೃಷ್ಟಿಯಲ್ಲಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೇವೆ. ಚುನಾವಣೆಗೋಸ್ಕರ ತೈಲಬೆಲೆಯನ್ನ ತಡೆಹಿಡಿಯಲಾಗಿದೆ ಅಂತ ಹೇಳೋದು ಸರಿ ಅಲ್ಲ ಅಂತ ಹೇಳಿದ್ದಾರೆ. ಇನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ರಾಮೇಶ್ವರ್‌ ತೇಲಿ ಮಾತಾಡಿ ಪೆಟ್ರೋಲಿಯಂ ಇಲಾಖೆ ತೈಲ ಕಂಪನಿಗಳೊಂದಿಗೆ ಸೇರಿ ಸದ್ಯದಲ್ಲೇ ದರ ನಿಗದಿ ಮಾಡುತ್ತೆ ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply