ಇದು ಭಾರತ ಸೇನೆಯಿಂದ ಟ್ರೈನಿಂಗ್ ಪಡೆದು ತಾಲಿಬಾನ್ ಕಮಾಂಡರ್ ಆದವನ ಕಥೆ!

masthmagaa.com:

ತಾಲಿಬಾನ್ ಟಾಪ್ ಕಮಾಂಡರ್​, ಇಡೀ ಗುಂಪಲ್ಲೇ 7ನೇ ಸ್ಥಾನದಲ್ಲಿರೋ ಶೇರ್ ಮೊಹ್ಮದ್ ಅಬ್ಬಾಸ್​ ಸ್ಟಾನಿಕ್​​ಝೈಗೂ ಭಾರತಕ್ಕೂ ಇರೋ ಲಿಂಕ್​​ ಬೆಳಕಿಗೆ ಬಂದಿದೆ. ಸದ್ಯ ತಾಲಿಬಾನಿಗಳ ಚೀಫ್ ನೆಗೋಶಿಯೇಟರ್​​​ ಆಗಿರೋ ಶೇರ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್ ಝೈ ತರಬೇತಿ ಪಡೆದಿದ್ದು ಭಾರತದ ಮಿಲಿಟರಿಯಿಂದಲೇ ಅಂತ ಗೊತ್ತಾಗಿದೆ. ಈಗ 60 ವರ್ಷ ವಯಸ್ಸಾಗಿರೋ ಇವರು ಭಾರತದ ಡೆಹ್ರಾಡೂನ್​​ನ ಮಿಲಿಟರಿ ಅಕಾಡೆಮಿಯಲ್ಲಿ ಟ್ರೇನಿಂಗ್ ಪಡ್ಕೊಂಡಿದ್ರು. ಕುಳ್ಳಗಿದ್ರೂ ಕಟ್ಟುಮಸ್ತಾಗಿದ್ದ ಈತನಿಗೆ ಶೇರು ಅಂತಲೇ ಕರೆಯಲಾಗ್ತಿತ್ತು. 1982ರಲ್ಲಿ ಅಂದ್ರೆ 20ನೇ ವಯಸ್ಸಲ್ಲಿ ಫಾರಿನ್ ಕೆಡೆಟ್ ಕೋಟಾದಲ್ಲಿ ಈತನಿಗೆ ಟ್ರೇನಿಂಗ್ ನೀಡಲಾಗಿತ್ತು. ಭಗತ್ ಸಿಂಗ್ ಬೆಟಾಲಿಯನ್​​​ನಲ್ಲಿದ್ದ ಇವರು ಮೀಸೆ ಬಿಟ್ಟು, ಗಡ್ಡ ಬೋಳಿಸಿದ್ರು. ಆದ್ರೆ ಈಗ ಮೀಸೆ ಬೋಳಿಸಿಕೊಂಡು ದಷ್ಟಪುಷ್ಟವಾಗಿ ಗಡ್ಡ ಮಾತ್ರ ಬಿಟ್ಟಿದ್ದಾರೆ ಅಂತ ಗೊತ್ತಾಗಿದೆ. ಭಾರತ ಸ್ವಾತಂತ್ರ್ಯ ಬಂದಾಗಿನಿಂದಲೂ ಫಾರಿನ್ ಕೆಡೆಟ್​​ಗಳಿಗೆ ತರಬೇತಿ ಕೋಟಾ ಶುರು ಮಾಡಿತ್ತು. ಆದ್ರೆ ಮೊದಲಿಗೆ ಇದ್ರಲ್ಲಿ ಅಫ್ಘಾನಿಸ್ತಾನಿಗಳಿಗೆ ಅವಕಾಶ ಇರಲಿಲ್ಲ. ಆದ್ರೆ 1971ರ ಯುದ್ಧದ ಬಳಿಕ ಅಫ್ಘಾನಿಸ್ತಾನಿಗಳಿಗೂ ಅವಕಾಶ ನೀಡಲಾಯ್ತು. ಅದರಂತೆ ಶೇರ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್ ಝೈನನ್ನು ಕರ್ಕೊಂಡು ಬಂದ ಭಾರತೀಯ ಮಿಲಿಟರಿ ಅಕಾಡೆಮಿ ಟ್ರೇನಿಂಗ್ ಕೊಟ್ಟಿತ್ತು. ಕುಳ್ಳಗಿದ್ರೂ ಕಟ್ಟುಮಸ್ತಾಗಿದ್ದ ಈತನಿಗೆ ಶೇರು ಅಂತಲೇ ಕರೆಯಲಾಗ್ತಿತ್ತು. ಮೇಜರ್ ಜನರಲ್ ಡಿಎ ಚತುರ್ವೇದಿ ಅನ್ನೋದು ಈ ವ್ಯಕ್ತಿಯ ಬ್ಯಾಚ್​​ಮೇಟ್ ಆಗಿದ್ರು. ಇವರ ಜೊತೆಗೆ ಋಷಿಕೇಶ್​​ಗೂ ಬಂದಿದ್ದ ಇವರು ಗಂಗಾ ನದಿಯಲ್ಲಿ ಸ್ನಾನ ಕೂಡ ಮಾಡಿದ್ರು. ಹೀಗೆ ಒಂದೂವರೆ ವರ್ಷ ಟ್ರೇನಿಂಗ್ ಪಡೆದ ಬಳಿಕ ಅಫ್ಘಾನಿಸ್ತಾನದ ನ್ಯಾಷನಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಶುರು ಮಾಡಿದ್ರು. ಆದ್ರೆ ನಂತರದಲ್ಲಿ ಅಂದ್ರೆ 1996ರಲ್ಲಿ ಸೇನೆ ಬಿಟ್ಟು ತಾಲಿಬಾನ್ ಸೇರಿದ್ರು. ಮಧ್ಯಸ್ಥಿಕೆ ಮಾಡೋದ್ರಲ್ಲಿ ಚತುರರಾಗಿರೋ ಇವರು, ಮಿಲಿಟರಿ ಟ್ರೇನಿಂಗ್ ಕೂಡ ಪಡೆದಿರೋದು ತಾಲಿಬಾನ್ ಗುಂಪಿಗೆ ಹೇಳಿ ಮಾಡಿಸಿದಂಗೆ ಆಗಿದೆ. ಹೀಗಾಗಿ ಮಧ್ಯಸ್ಥಿಕೆಗಳಿಗೆಲ್ಲಾ ಇವರೇ ಹೋಗ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಈ ಹಿಂದೆ ಅಮೆರಿಕದಲ್ಲಿ ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಅವರನ್ನು ಭೇಟಿಯಾಗಿ ಚರ್ಚಿಸಿದ್ರು. ಇನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಇದ್ದಾಗ 1997ರಲ್ಲಿ ನ್ಯೂಯಾರ್ಕ್ ಟೈಮ್ಸ್ ಆರ್ಟಿಕಲ್ ಒಂದ್ರಲ್ಲಿ ಇವರನ್ನು ಅಪ್ಘಾನಿಸ್ತಾನ ವಿದೇಶಾಂಗ ಸಚಿವ ಅಂತ ಕೂಡ ಕರೆಯಲಾಗಿದೆ. ಇನ್ನೂ ಒಂದು ವಿಚಾರ ಅಂದ್ರೆ ಕತಾರ್​ನ ದೋಹಾದಲ್ಲಿ ತಾಲಿಬಾನಿಗಳು ಪೊಲಿಟಿಕಲ್ ಆಫೀಸ್ ಶುರುಮಾಡಿದ್ದಾರೆ. 2012ರಿಂದ ಈ ಕಚೇರಿ ಮುನ್ನಡೆಸುತ್ತಿರೋದೇ ಈ ಸ್ಟಾನಿಕ್​ ಝೈ.. ಈ ಬಗ್ಗೆ ಪ್ರತಿಕ್ರಿಯಿಸಿರೋ ಮೇಜರ್ ಜನರಲ್ ಡಿಎ ಚತುರ್ವೇದಿ, ಸ್ಟಾನಿಕ್​ಝೈಗೆ ಭಾರತದಲ್ಲಿ ಆತ್ಮೀಯವಾದ ನೆನಪುಗಳಿವೆ. ಭಾರತ ಸರ್ಕಾರ ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸೋ ಟೈಂ ಬಂದಾಗ ಸ್ಟಾನಿಕ್​ಝೈಗೆ ಇರೋ ಭಾರತ ಲಿಂಕ್ ಉಪಯೋಗಕ್ಕೆ ಬರಬಹುದು. ಭಾರತ ಆತನಿಗೆ ಮಾಡಿರೋ ಉಪಕಾರವನ್ನು ಆತ ಮರೆತಿರಲಿಕ್ಕಿಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply