ಶಿಲ್ಪಾ ಶೆಟ್ಟಿ ಯಡವಟ್ಟು: ಹಿಗ್ಗಾ ಮುಗ್ಗಾ ಬೆವರಿಳಿಸಿದ ನೆಟ್ಟಿಗರು!

masthmagaa.com:

ಸ್ನೇಹಿತರೇ, ಒಂದು ಕಾಲ ಇತ್ತು ಸೌತ್‌ ಇಂಡಿಯನ್‌ ಸಿನಿಮಾಗಳು ಅಂತ ಅಂದ್ರೆ ಬರೀ ತಮಿಳು ಸಿನಿಮಾಗಳು ಅನ್ನುವಂತ ಭಾವನೆ ಇತ್ತು. ಕಾಲ ಸರಿದಂತೆ ತೆಲುಗು ಮತ್ತು ಮಲಯಾಳಂ ಸಿನಿಮಾಗಳು ತಮ್ಮದೇ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನ ಮೂಡಿಸಿ ತಮ್ಮ ಐಡೆಂಟಿಟಿಯನ್ನ ಇಡೀ ದೇಶಕ್ಕೆ ಪರಿಚಯ ಮಾಡಿ ಕೊಟ್ಟವು. ಕನ್ನಡದಲ್ಲಿ ಮುಂಗಾರು ಮಳೆ, ದುನಿಯಾ ಈ ರೀ ತಿ ಕೆಲವು ಸಿನಿಮಾಗಳು ದೇಶದಾದ್ಯಂತ ಸುದ್ದಿಯಾದಾಗ ಇವುಗಳನ್ನ ತಮಿಳು, ತೆಲುಗು ಸಿನಿಮಾ ಅಂತ ಅಂದ್ಕೊಂಡವರೇ ಹೆಚ್ಚು. ಇತ್ತೀಚೆಗೆ 2018ರಲ್ಲಿ ಕೆಜಿಎಫ್‌ ಚಾಪ್ಟರ್‌1 ಸಿನಿಮಾ ಬಿಡುಗಡೆಯಾದ ಮೇಲೆ ಹೊರ ರಾಜ್ಯದ ಸಿನಿ ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನ ಪ್ರತ್ಯೇಕವಾಗಿ ಐಡೆಂಟಿಫೈ ಮಾಡುವ ಪ್ರಕ್ರಿಯೆ ಆರಂಭ ಆಯ್ತು.ಇದನ್ನ ಚಾರ್ಲಿ 777, ಕಾಂತಾರ, ಕೆಜಿಎಫ್‌2 ಸಿನಿಮಾಗಳು ಮುಂದುವರೆಸಿಕೊಂಡು ಹೋದವು. ಇಷ್ಟಾದ್ರೂ ಕೂಡ ಕೆಲವರು ಈ ಸಿನಿಮಾಗಳನ್ನ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳು ಅಂತಾನೆ ಅಂದ್ಕೊಡಿದಾರೆ.

ಇನ್ನೂ ಕರ್ನಾಟಕ ಮೂಲದವರು ಕನ್ನಡ ಮರೆಯೋದು ಬಹುಷಃ ಕಾಮನ್‌ ಆಗಿ ಬಿಟ್ಟಿದೆ ಅನ್ಸತ್ತೆ. ಇದೇ ವಿಷಯದ ಕುರಿತಾಗಿ ರಶ್ಮಿಕಾ ಮಂದಣ್ಣ ಈಗಾಗಲೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಅನ್‌ಒಫಿಷಿಯಲ್‌ ಆಗಿ ಕನ್ನಡ ಚಿತ್ರರಂಗದಿಂದ ಬ್ಯಾನ್‌ ಕೂಡ ಆಗಿದ್ದಾರೆ. ಈಗ ಅದೇ ಸಾಲಿಗೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಎಂಟ್ರಿ ಕೊಟ್ಟಿದಾರೆ. ಮೂಲತಃ ಮಂಗಳೂರಿನವರಾದ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡಕ್ಕೆ ಶಿಲ್ಪಾ ಶೆಟ್ಟಿಯವರನ್ನ ಪರಿಚಯಿಸಿದ್ದು ಮಾತ್ರ ನಮ್ಮ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು. 1998ರಲ್ಲಿರವಿಚಂದ್ರನ್‌ ಅಭಿನಯದ `ಪ್ರೀತ್ಸೋದ್ ತಪ್ಪಾ?’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಶಿಲ್ಪಾಶೆಟ್ಟಿ 2003ರಲ್ಲಿ `ಒಂದಾಗೋಣ ಬಾ’, 2005 ರಲ್ಲಿ`ಆಟೋ ಶಂಕರ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇದೀಗ ಸುದೀರ್ಘ 18 ವರ್ಷಗಳ ಬಳಿಕ ಚಂದನವನಕ್ಕೆ ರೀ ಎಂಟ್ರಿಕೊಡ್ತಿದ್ದಾರೆ. ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಪ್ರೇಮ್‌ ನಿರ್ದೇಶನದ “ಕೆಡಿ” ಚಿತ್ರದಲ್ಲಿ ಸತ್ಯವತಿ ಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಅವರ ಫಸ್ಟ್‌ ಲುಕ್‌ ಯುಗಾದಿ ಹಬ್ಬದ ದಿನದಂದು “ಕೆಡಿ” ಚಿತ್ರತಂಡ ರಿಲೀಸ್‌ ಮಾಡಿತ್ತು.

ತಮ್ಮ ಸತ್ಯವತಿ ಫಸ್ಟ್‌ ಲುಕ್‌ ಪೋಸ್ಟರ್‌ನ್ನ ಶಿಲ್ಪಾ ಶೆಟ್ಟಿಯವರು ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡ್ಕೊಂಡಿದ್ರು. ಈ ಪೋಸ್ಟರ್‌ ಜೊತೆಗೆ ಯುಗಾದಿ ಹಬ್ಬಕ್ಕೆ ಶುಭ ಕೋರಿದ ಶಿಲ್ಪಾ ಶೆಟ್ಟಿಕೇವಲ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಶುಭ ಕೋರುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಯುಗಾದಿ ಹಬ್ಬಕ್ಕೆ ಶಿಲ್ಪಾ ಶೆಟ್ಟಿಕೆಡಿ ಸಿನಿಮಾದ ಸತ್ಯವತಿ ಫಸ್ಟ್‌ ಲುಕ್‌ ಪೋಸ್ಟರ್‌ನ್ನ ಶೇರ್‌ ಮಾಡಿ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಟ್ವೀಟ್‌ ಮಾಡಿದ್ರು. 22 ಅಂದ್ರೆ ಮೊನ್ನೆ ಅವರು ಟ್ವಿಟ್‌ರ್‌ನಲ್ಲಿ ಯುಗಾದಿ ಹಬ್ಬದ ಶುಭಾಷಯಗಳು ಅಂತ ಕೇವಲ ಹಿಂದಿ ಮತ್ತು ತೆಲುಗಿನಲ್ಲಿ ಬರೆದು ಪೋಸ್ಟ್‌ ಮಾಡಿದ್ದರು. ಈ ಟ್ವೀಟ್‌ ನೋಡಿ ಕೆಂಡಾಮಂಡಲರಾದ ಕೆಲ ನೆಟ್ಟಿಗರು ಮಾಡ್ತಾ ಇರೋದು ಕನ್ನಡ ಸಿನಿಮಾ, ಆದರೆ ಟ್ವೀಟ್‌ ಮಾತ್ರ ತೆಲುಗು ಮತ್ತು ಹಿಂದಿಯಲ್ಲಾ? ಅಂತ ಶಿಲ್ಪಾ ಶೆಟ್ಟಿಯವರಿಗೆ ಸಿಕ್ಕಾಪಟ್ಟೆ ಕ್ಲಾಸ್‌ ತಗೋಳ್ತಾ ಇದಾರೆ.

ಸ್ನೇಹಿತರೇ, ಆಗಲೇ ಹೇಳಿದಂತೆ ಇವರು ಮೂಲತಃ ಮಂಗಳೂರಿನವರು, ಅಲ್ಲದೇ ಕನ್ನಡದಲ್ಲಿ ಮೂವಿಗಳನ್ನು ಸಹ ಮಾಡಿದ್ದಾರೆ, ಅಂದಮೇಲೆ ಕನ್ನಡ ಬಂದೆ ಬರತ್ತೆ. ಅದರೂ ಸಹ ಕನ್ನಡ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ ಅಂತ ಅರ್ಥ ಆಗೋದಿಲ್ಲ. ಮಿಸ್‌ ಆಗಿ ತಪ್ಪಾಗಿರಬಹುದು ಅಂತ ಹೇಳೋಕೆ ಅವರಿಗೆ ಬೇಕಾದಷ್ಟು ಟೈಮ್‌ ಇತ್ತು, ಆಗಿರುವ ಯಡವಟ್ಟನ್ನ ಸರಿ ಮಾಡ್ಕೊಳೊದಕ್ಕೆ ಕನ್ನಡದಲ್ಲಿ ಮತ್ತೊಂದು ಪೋಸ್ಟ್‌ ಹಾಕುವ ಅವಕಾಶ ಕೂಡ ಇತ್ತು.ಆದರೆ ಅವರು ಅದನ್ನೂ ಮಾಡಿಲ್ಲ. ಇದೇ ವಿಷಯಕ್ಕೆ ಟ್ವಿಟ್ಟರ್‌ನಲ್ಲಿ ಕನ್ನಡಿಗರು ಶಿಲ್ಪಾ ಶೆಟ್ಟಿಯವರನ್ನ ಟ್ರೋಲ್‌ ಮಾಡ್ತಾ ಇದ್ರು ಕೂಡ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೋಸ್ಟ್‌ ಮಾಡಿ 2 ದಿನ ಆದರೂ ಸಹ ಅದರಲ್ಲಿ ಯಾವುದೇ ಚೇಂಜಸ್‌ ಆಗಿಲ್ಲ. ಇದೆಲ್ಲಾ ನೋಡಿದ್ರೆ ಕನ್ನಡದ ಬಗೆಗಿನ ತಾತ್ಸಾರ ಭಾವನೆ ಸ್ಪಷ್ಠ ಆಗತ್ತೆ.

ಸಾಮಾನ್ಯವಾಗಿ ಸೆಲಬ್ರಿಟಿಗಳು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟನ್ನ ತಾವೇ ಹ್ಯಾಂಡಲ್‌ ಮಾಡಲ್ಲ. ಅದಕ್ಕೋಸ್ಕರವೇ ಪಿಆರ್‌ ಟೀಮ್‌ ಇರತ್ತೆ, ಪ್ರತಿಯೊಂದು ಟ್ವೀಟ್‌ನ ಹಿಂದೆ ಸಾಕಷ್ಟು ಚರ್ಚೆ ಆಗಿರತ್ತೆ. ಆದರೂ ಈ ರೀತಿ ಒಂದು ಯಡವಟ್ಟು ಆಗಿದೆ. ಎಟ್‌ಲಿಸ್ಟ್‌ ತಪ್ಪಾದ ನಂತರ ಟ್ರೋಲ್‌ ಆಗೋಕೆ ಶುರು ಆದಮೇಲೆ ಆದರೂ ಇದು ಶಿಲ್ಪಾ ಶೆಟ್ಟಿಯವರು ಟೀಮ್‌ನ ಗಮನಕ್ಕೆ ಬಂದಿರತ್ತೆ.ಆದರೂ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಮಾಡಿದ ತಪ್ಪನ್ನ ಸರಿ ಮಾಡಿಕೊಳ್ಳುವ ಗೋಜಿಗು ಕೂಡ ಶಿಲ್ಪಾ ಶೆಟ್ಟಿ ಹೋಗಿಲ್ಲ.
ಟ್ವೀಟ್‌ ಮಾಡಿ 2 ದಿನ ಆದರೂ ನೆಟ್ಟಿಗರು ಆ ಒಂದು ಟ್ವೀಟ್‌ಗೆ ಅಸಾಮಾಧಾನ ಹೊರಹಾಕ್ತಾನೇ ಇದಾರೆ. “ಪ್ರೇಮ್‌ ನಿರ್ದೇಶನದ “ಕೆಡಿ” ಚಿತ್ರದಲ್ಲಿ ಇವರು ಕನ್ನಡದಲ್ಲೇ ಅಲ್ಲವಾ ಅಭಿನಯ ಮಾಡ್ತಾ ಇರೋದು. ಕನ್ನಡದಲ್ಲೇ ಅಲ್ಲವಾ ಇವರು ಡೈಲಾಗ್ಸ್‌ ಹೇಳಬೇಕಾಗಿರೋದು. ಇಷ್ಟೆಲ್ಲಾ ಇದ್ರು ಸಹ ಕನ್ನಡ ಅಂದ್ರೆ ಯಾಕಿಷ್ಟು ತಾತ್ಸಾರ ಇವರಿಗೆ. ಕನ್ನಡದಲ್ಲಿ ಮೂವಿ ಅನೌನ್ಸ್‌ ಆಗಿದೆ ಇವರು ತೆಲುಗಿನಲ್ಲಿ ವಿಶ್‌ಮಾಡ್ತಾರೆ, ಯಾವ ಸಿನಿಮಾದಲ್ಲಿ ನಟಿಸ್ತಾ ಇದೀನಿ ಅನ್ನೊದಾದ್ರು ಗೊತ್ತಿದಿಯಾ ? ಇವರನ್ನ ಈ ಸಿನಿಮಾದಿಂದ ತೆಗೆದು ಹಾಕಿ ಇಲ್ಲವಾದ್ರೆ ಸಿನಿಮಾ ರಿಲೀಸ್‌ ಆದಮೇಲೆ ಇದರ ಏಫೆಕ್ಟ್‌ ಗೊತ್ತಾಗತ್ತೆ” ಅಂತ ಅಭಿಮಾನಿಗಳು ಕಿಡಿ ಕಾರ್ತಾ ಇದಾರೆ.

-masthmagaa.com

Contact Us for Advertisement

Leave a Reply